ಕೊರೊನಾ ನಂತರ ಯುವಜನತೆಯ ದಿಢೀರ್ ಸಾವು: ಕಾರಣ ತಿಳಿಯಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿಂದ ಎರಡು ಅಧ್ಯಯನ - Mahanayaka
8:22 PM Saturday 21 - September 2024

ಕೊರೊನಾ ನಂತರ ಯುವಜನತೆಯ ದಿಢೀರ್ ಸಾವು: ಕಾರಣ ತಿಳಿಯಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿಂದ ಎರಡು ಅಧ್ಯಯನ

20/08/2023

ಕೊರೋನಾ ಹಾಗೂ ಕೊರೊನಾ ಚಿಕಿತ್ಸೆ ನಂತರ ಜಗತ್ತಿನಲ್ಲಿ ಯುವಜನತೆಯ ಹಠಾತ್ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಆರೋಗ್ಯವಂತ ಯುವಜನತೆ ಹಠತ್ತಾಗಿ ಸಾವನ್ನಪ್ಪಲು ಕಾರಣ ಏನೆಂಬುದರ ಬಗ್ಗೆ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಎರಡು ಮಹತ್ವದ ಅಧ್ಯಯನಗಳನ್ನು ಕೈಗೆತ್ತಿಕೊಂಡಿವೆ.

ಐಸಿಎಂಆರ್ ನ ಮಹಾನಿರ್ದೇಶಕ ರಾಜೀವ್ ಬಹ್ಲ್ ಈ ಕುರಿತು ಮಾತನಾಡಿದ್ದು, ಇತ್ತೀಚಿಗೆ 18 ರಿಂದ 45 ವರ್ಷದೊಳಗಿನ ವ್ಯಕ್ಠಿಗಳು ಹಠಾತ್ ಸಾವಿಗೀಡಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಹೀಗಾಗಿ ನಾವು ಎರಡು ಅಧ್ಯಯನ ಆರಂಭಿಸಿದ್ದೇವೆ. ಈ ಸಾವುಗಳಿಗೂ ಕೋವಿಡ್ ಗೂ ಏನಾದರೂ ಸಂಬಂಧ ಇದ್ಯಾ..? ಇದ್ದರೆ ಅದನ್ನು ತಡೆಯುವ ಕ್ರಮಗಳೇನು ಎಂಬುದನ್ನು ತಿಳಿಯುವುದೇ ಈ ಅಧ್ಯಯನದ ಉದ್ದೇಶ ಎಂದು ಅವರು ಗುಜರಾತ್‌ನ ಗಾಂಧಿನಗರದಲ್ಲಿ ಡಬ್ಲ್ಯುಎಚ್ ಓ ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಶೃಂಗಸಭೆಯ (ಜಿಸಿಟಿಎಂ) ವೇಳೆ ತಿಳಿಸಿದ್ದಾರೆ.

ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ 50 ಶವಪರೀಕ್ಷೆಗಳನ್ನು ಅಧ್ಯಯನ ಮಾಡಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ ಇಂತಹ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಕೋವಿಡ್ ನಂತರ ಹಠಾತ್ ಸಾವನ್ನಪ್ಪಿದವರ ಮತ್ತು ಅದಕ್ಕೂ ಮುನ್ನ ಮೃತಪಟ್ಟವರ ಶವಪರೀಕ್ಷೆಗಳ ವರದಿಯನ್ನು ಹೋಲಿಸಿ ಅಧ್ಯಯನ ನಡೆಸಲಾಗುತ್ತಿದೆ. ಕೋವಿಡ್ ನಂತರ ಸಾವಿಗೂ ಮುನ್ನ ಆ ವ್ಯಕ್ಠಿಯ ದೇಹದೊಳಗೆ ಯಾವುದಾದರೂ ಶಾರೀರಿಕ ಬದಲಾವಣೆಗಳಿತ್ತೇ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


Provided by

ಇನ್ನೊಂದು ಅಧ್ಯಯನದಲ್ಲಿ ಕಳೆದ ಒಂದು ವರ್ಷದಲ್ಲಿ 18 ರಿಂದ 45 ವರ್ಷ ವಯಸ್ಸಿನ ಹಠಾತ್ ಸಾವಿನ ಡೇಟಾವನ್ನು ಬಳಸುತ್ತಿದೆ. ಇದು ಭಾರತದಾದ್ಯಂತ 40 ಕೇಂದ್ರಗಳಿಂದ ಕೋವಿಡ್ ಸೋಂಕಿತ ರೋಗಿಗಳ ಡೇಟಾವನ್ನೂ ಹೊಂದಿದೆ. ಅವರು ಡಿಸ್ಚಾರ್ಜ್ ಆದ ನಂತರ ಒಂದು ವರ್ಷದವರೆಗೆ ಕೋವಿಡ್ ರೋಗಿಗಳನ್ನು ಫಾಲೋ ಮಾಡುತ್ತಾರೆ. ಈ ಕೇಂದ್ರಗಳು ಕೋವಿಡ್ ದಾಖಲಾತಿಗಳು, ಆಸ್ಪತ್ರೆಯ ಡಿಸ್ಚಾರ್ಜ್ ಮತ್ತು ಸಾವುಗಳ ಡೇಟಾವನ್ನು ಸಂಗ್ರಹಿಸುತ್ತದೆ ಎಂಬ ಮಾಹಿತಿ ಸಿಕ್ಕಿದೆ.

ಇತ್ತೀಚಿನ ಸುದ್ದಿ