ಫ್ರಿಡ್ಸ್ ಸ್ಫೋಟಿಸಿ ಮನೆ ಭಸ್ಮ | ಕಾಪಾಡಲು ಬಂದ ನೆರೆಮನೆಯ ವ್ಯಕ್ತಿಗೂ ಗಾಯ - Mahanayaka
5:02 PM Wednesday 11 - December 2024

ಫ್ರಿಡ್ಸ್ ಸ್ಫೋಟಿಸಿ ಮನೆ ಭಸ್ಮ | ಕಾಪಾಡಲು ಬಂದ ನೆರೆಮನೆಯ ವ್ಯಕ್ತಿಗೂ ಗಾಯ

03/02/2021

ಮೈಸೂರು: ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಫ್ರಿಡ್ಜ್ ಸ್ಫೋಟಗೊಂಡಿದ್ದು, ಪರಿಣಾಮವಾಗಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಹುಣಸೂರು ಪಟ್ಟಣದ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ.

ಚಂದ್ರು ಎಂಬವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಂದ್ರು ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆಕಸ್ಮಿಕವಾಗಿ ಬೆಂಕಿ ತಗಲಿದ ಬಳಿಕ ಪ್ರಿಡ್ಸ್ ಸ್ಫೋಟಗೊಂಡಿದೆ.

ಘಟನೆಯಿಂದಾಗಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಘಟನೆ ನಡೆದ ವೇಳೆ ನೆರೆಯ ಮನೆಯ ನಿವಾಸಿ ಮೊಹಮ್ಮದ್ ಉರ್ ಎಂಬವರು ಅನಾಹುತ ತಪ್ಪಿಸಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ, ಬದಲಾಗಿ ಅವರಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ