ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಮಳೆಯ ರುದ್ರನರ್ತನ: ಮತ್ತೆ 13 ಮಂದಿ ಸಾವು - Mahanayaka

ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಮಳೆಯ ರುದ್ರನರ್ತನ: ಮತ್ತೆ 13 ಮಂದಿ ಸಾವು

24/08/2023

ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮತ್ತೆ 13 ಜನರು ಸಾವನ್ನಪ್ಪಿದ್ದಾರೆ. ಅತ್ತ ಹವಾಮಾನ ಇಲಾಖೆ (ಐಎಂಡಿ) ಎರಡೂ ರಾಜ್ಯಗಳಲ್ಲಿ ರೆಡ್ ಮತ್ತು ಅರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಉಂಟಾದ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿ 12 ಜನರು ಸಾವನ್ನಪ್ಪಿದ್ರೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. 400 ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಹಲವಾರು ಮನೆಗಳಿಗೆ ಹಾನಿಯಾಗಿದೆ.

ಮುಂದಿನ 24 ಗಂಟೆಗಳಲ್ಲಿ ಶಿಮ್ಲಾ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಏತನ್ಮಧ್ಯೆ, ಶಿಮ್ಲಾ, ಸಿರ್ಮೌರ್, ಕಾಂಗ್ರಾ, ಚಂಬಾ, ಮಂಡಿ, ಹಮೀರ್ಪುರ್, ಸೋಲನ್, ಬಿಲಾಸ್ಪುರ ಮತ್ತು ಕುಲ್ಲು – ಒಂಬತ್ತು ಜಿಲ್ಲೆಗಳಲ್ಲಿ ಭಾರೀ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ.

ಕಾಂಗ್ರಾ, ಕುಲ್ಲು, ಮಂಡಿ, ಶಿಮ್ಲಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಸಂಸ್ಥೆ ಕೂಡ ಅರೆಂಜ್ ಎಚ್ಚರಿಕೆ ನೀಡಿದ್ದು, ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿ