ವಿಶ್ ಮಾಡುವ ವೇಳೆ ಯಡವಟ್ಟು: ಟ್ರೋಲ್ ಆಗುತ್ತಿದೆ ಮಮತಾ‌ ಬ್ಯಾನರ್ಜಿ ವೀಡಿಯೋ..! - Mahanayaka

ವಿಶ್ ಮಾಡುವ ವೇಳೆ ಯಡವಟ್ಟು: ಟ್ರೋಲ್ ಆಗುತ್ತಿದೆ ಮಮತಾ‌ ಬ್ಯಾನರ್ಜಿ ವೀಡಿಯೋ..!

25/08/2023

ಚಂದ್ರಯಾನ 3‌ ಯೋಜನೆ ಯಶಸ್ವಿ ಆಗುತ್ತಿದ್ದಂತೆ ವಿಶ್ವದ ಗಣ್ಯರು ಶುಭಾಶಯ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ವಿಶ್‌ ಮಾಡಲು ಹೋಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಭಾರೀ ಟ್ರೋಲ್‌ ಆಗುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಬಾಹ್ಯಾಕಾಶ ಸಂಶೋಧನೆ, ವಿಜ್ಞಾನಿಗಳ ಶ್ರಮದ ಬಗ್ಗೆ ಮಾತನಾಡುತ್ತಾ ಸಿಎಂ ಮಮತಾ ಬ್ಯಾನರ್ಜಿ ಭಾರತದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಎನ್ನುವ ಬದಲು ಹಿಂದಿ ಚಿತ್ರನಟ ರಾಕೇಶ್‌ ರೋಷನ್‌ ಹೆಸರು ಹೇಳಿದ್ದಾರೆ.

ಈ ಮಾತು ಸಖತ್‌ ಟ್ರೋಲ್‌ ಆಗುತ್ತಿದೆ. ಅಷ್ಟೇ ಅಲ್ಲ, ಚಂದ್ರನ ಮೇಲೆ ರಾಕೇಶ್‌ ರೋಷನ್‌ ಕಾಲಿಟ್ಟಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಂದ್ರನಿಂದ ಭಾರತ ಹೇಗೆ ಕಾಣುತ್ತದೆ ಎಂದು ಕೇಳಿದ್ದರು ಎಂದು ಹೇಳುವ ಮೂಲಕ ಸಿಎಂ ಮಮತಾ ನಗೆಪಾಟಲಿಗೀಡಾಗಿದ್ದಾರೆ.

ರಾಕೇಶ್‌ ಶರ್ಮಾ ಭಾರತದ ವಾಯುಪಡೆಯ ಪೈಲೆಟ್‌ ಆಗಿದ್ದು 1984ರಲ್ಲಿ ಸೋವಿಯತ್‌ ಒಕ್ಕೂಟದ ಸೋಯುಜ್‌ ಟಿ 11 ಯೋಜನೆಯ ಭಾಗವಾಗಿದ್ದರು. ಆ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾಗಿದ್ದಾರೆ. ಈ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಜೊತೆ ರಾಕೇಶ್‌ ಶರ್ಮಾ ಬಾಹ್ಯಾಕಾಶದಿಂದ ಮಾತನಾಡಿದ್ದರು. ಭಾರತ ಹೇಗೆ ಕಾಣುತ್ತದೆ ಎಂಬ ಪ್ರಶ್ನೆಗೆ ‘ಸಾರೇ ಜಹಾನ್‌ ಸೇ ಅಚ್ಛಾ’ ಎಂದು ಭಾರತವನ್ನು ರಾಕೇಶ್‌ ಶರ್ಮಾ ಬಣ್ಣಿಸಿದ್ದರಂತೆ.

ಇತ್ತೀಚಿನ ಸುದ್ದಿ