ಮೂನ್ ವಾಕ್ ವೇಳೆ ರೋವರ್ ಪ್ರಗ್ಯಾನ್ ಗೆ ಎದುರಾಯ್ತು ದೊಡ್ಡ ಕುಳಿ!: ಇಲ್ಲಿದೆ ಮಾಹಿತಿ - Mahanayaka
2:56 PM Saturday 21 - September 2024

ಮೂನ್ ವಾಕ್ ವೇಳೆ ರೋವರ್ ಪ್ರಗ್ಯಾನ್ ಗೆ ಎದುರಾಯ್ತು ದೊಡ್ಡ ಕುಳಿ!: ಇಲ್ಲಿದೆ ಮಾಹಿತಿ

candrayana
28/08/2023

ಚಂದ್ರನ ಮೇಲೆ ಮೂನ್ ವಾಕ್ ಮಾಡುತ್ತಿರುವ ರೋವರ್ ಗೆ ಪ್ರಗ್ಯಾನ್ ಗೆ ಸುಮಾರು 4 ಮೀಟರ್ ವ್ಯಾಸ ಹೊಂದಿರುವ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

ಆಗಸ್ಟ್ 27ರಂದು ರೋವರ್ ತಾನಿದ್ದ ಸ್ಥಳದಿಂದ ಮೂರು ಮೀಟರ್ ಮುಂದೆ ಸಾಗುವ ಮಾರ್ಗದಲ್ಲಿ 4 ಮೀಟರ್ ವ್ಯಾಸದ ಕುಳಿಯೊಂದು ಪತ್ತೆಯಾಗಿದೆ. ಹಾಗಾಗಿ ರೋವರ್ ಸಾಗುತ್ತಿರುವ ಮಾರ್ಗವನ್ನು ಬದಲಿಸಲಾಗಿದೆ ಎಂದು ಇಸ್ರೋ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

ಇದೀಗ ಸುರಕ್ಷಿತವಾದ ಹಾದಿಯಲ್ಲಿ ರೋವರ್ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಈ ಟ್ವೀಟ್ ನೊಂದಿಗೆ ಇಸ್ರೋ ರೋವರ್ ಸೆರೆ ಹಿಡಿದ ಕುಳಿಯ ಚಿತ್ರವನ್ನೂ ಹಂಚಿಕೊಂಡಿದೆ.


Provided by

ಇತ್ತೀಚಿನ ಸುದ್ದಿ