ದೇಶದ ಜಿಡಿಪಿ ಶೇಕಡಾ 7.8 ರಷ್ಟು ಹೆಚ್ಚಳ: ಚೀನಾ ದೇಶವನ್ನು ಹಿಂದಿಕ್ಕಿದ ಭಾರತ - Mahanayaka
5:12 PM Saturday 21 - September 2024

ದೇಶದ ಜಿಡಿಪಿ ಶೇಕಡಾ 7.8 ರಷ್ಟು ಹೆಚ್ಚಳ: ಚೀನಾ ದೇಶವನ್ನು ಹಿಂದಿಕ್ಕಿದ ಭಾರತ

31/08/2023

ನಮ್ಮ ದೇಶವು 2023-24ರ ಏಪ್ರಿಲ್ ಜೂನ್ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಹೆಚ್ಚಾಗಿದೆ. ಇದರಲ್ಲಿ ಮುಖ್ಯವಾಗಿ ಕೃಷಿ ಮತ್ತು ಹಣಕಾಸು ಕ್ಷೇತ್ರಗಳ ಉತ್ತಮ ಕಾರ್ಯಕ್ಷಮತೆಯಿಂದಾಗಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇಕಡಾ 7.8ರಷ್ಟು ಹೆಚ್ಚಿದೆ.

ಇನ್ನು ಹಿಂದಿನ ಕ್ವಾರ್ಟರ್​ನಲ್ಲಿ ಅಂದರೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 6.1ರಷ್ಟು ಇತ್ತು. 2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) 13.1 ರಷ್ಟು ವಿಸ್ತರಿಸಿದೆ.


Provided by

ಏಪ್ರಿಲ್-ಜೂನ್ 2023 ರಲ್ಲಿ ಚೀನಾ ಕೇವಲ ಶೇ. 6.3 ಬೆಳವಣಿಗೆಯನ್ನು ದಾಖಲಿಸಿದ್ದು, ಭಾರತ ಚೀನಾವನ್ನು ಹಿಂದಿಕ್ಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ ದತ್ತಾಂಶದ ಪ್ರಕಾರ, ಕೃಷಿ ವಲಯವು ಶೇ. 3.5 ರಷ್ಟು ಬೆಳವಣಿಗೆ ಕಂಡಿದೆ. 2022-23ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 2.4 ರಷ್ಟು ಬೆಳವಣೆಗೆ ದಾಖಲಿಸಿತ್ತು. ಆದರೂ, ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯ ವೇಗವು ಶೇಕಡಾ 4.7 ಕ್ಕೆ ಕಡಿಮೆಯಾಗಿದೆ, ಕಳೆದ ವರ್ಷದ ಅವಧಿಯಲ್ಲಿ ಇದು ಶೇಕಡಾ 6.1 ರಷ್ಟಿತ್ತು.

ಇತ್ತೀಚಿನ ಸುದ್ದಿ