ಇಚ್ಛೆಗೆ ವಿರುದ್ಧವಾಗಿ ಮದುವೆಯಾದಳೆಂದು ಮಗಳ ಮೇಲೆ ಸೇಡು ತೀರಿಸಿದ ಹೆತ್ತವರು!
04/02/2021
ತುಮಕೂರು: ಮನೆಯವರ ವಿರೋಧದ ನಡುವೆಯೂ ಮದುವೆಯಾದರು ಎನ್ನುವ ದ್ವೇಷದಿಂದ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ ವಿಚಿತ್ರ ಪ್ರಕರಣ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.
ಮಲ್ಲಸಂದ್ರಪಾಳ್ಯ ಗ್ರಾಮದ ರವಿಚಂದ್ರ ಹಾಗೂ ಅನು ಎಂಬವರು ಪ್ರೀತಿಸಿ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇಬ್ಬರ ಪ್ರೀತಿಗೆ ಯುವತಿಯ ಮನೆಯವರಿಂದ ವಿರೋಧವಿತ್ತು. ಆದರೆ ಮನೆಯವರ ವಿರೋಧದ ನಡುವೆಯ ಯುವ ಜೋಡಿ ವಿವಾಹವಾಗಿದ್ದಾರೆ.
ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎನ್ನುವ ದ್ವೇಷಕ್ಕೆ ಅನು ಪೋಷಕರಾದ ಸಂತೋಷ್ ಹಾಗೂ ಗಂಗಮ್ಮ ಅಡಿಕೆ ಗಿಡಗಳನ್ನು ನಾಶ ಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.