ಮಾಲ್ ನಲ್ಲಿಯೇ ವೇಶ್ಯಾವಾಟಿಕೆ | 14 ಯುವತಿಯರ ರಕ್ಷಣೆ
04/02/2021
ನೋಯ್ಡಾ:ಮಾಲ್ ನಲ್ಲಿಯೇ ವೇಶ್ಯಾವಾಟಿಕೆ ಜಾಲ ನಡೆಯುತ್ತಿದ್ದು, ಈ ಪ್ರದೇಶಕ್ಕೆ ದಾಳಿ ನಡೆಸಿದ ಉತ್ತರಪ್ರದೇಶ ಪೊಲೀಸರು ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ನೋಯ್ಡಾ 18 ಸೆಕ್ಟರ್ ನಲ್ಲಿನ ಮಾಲ್ ಗಳಲ್ಲಿದ್ದ ಮಸಾಜ್ ಪಾರ್ಲರ್ ಗಳಲ್ಲಿಯೇ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ಪ್ರದೇಶಕ್ಕೆ ದಾಳಿ ನಡೆಸಿದ ಪೊಲೀಸರು 14 ಯುವತಿಯರನ್ನು ರಕ್ಷಿಸಿದ್ದು, ಮಾಲಕರು ಹಾಗೂ ಗ್ರಾಹಕರನ್ನು ಬಂಧಿಸಿದ್ದಾರೆ.
ಯುವತಿಯರಿಗೆ ಆಮಿಷ ಒಡ್ಡಿ ಮಾಲಕ ತನ್ನ ಮಸಾಜ್ ಸೆಂಟರ್ ಗೆ ಕರೆಯುತ್ತಿದ್ದ ಹಾಗಾಗಿ ಯುವತಿಯರು ಮೋಸ ಹೋದವರು ಎಂದು ಪರಿಗಣಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
ಇನ್ನೂ ಗ್ರಾಹಕರು ಹಾಗೂ ಮಾಲಕರ ವಿರುದ್ಧ ಅಕ್ರಮ ಕಳ್ಳಸಾಗಾಣೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಕ್ಷಿಸಲಾದ ಯುವತಿಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಡಿಸಪಿ ತಿಳಿಸಿದ್ದಾರೆ.