ಮಗುವಿನ ಸಂಸ್ಕಾರ: ತನ್ನ ಟಿಫಿನ್ ಊಟವನ್ನೇ ಭಿಕ್ಷುಕನಿಗೆ ತಿನ್ನಿಸಿ ವೈರಲ್ ಆದ ಬಾಲಕಿ

06/09/2023
ದಿಲ್ಲಿಯಲ್ಲಿ ಶಾಲಾ ಬಾಲಕಿಯೊಬ್ಬಳು ಭಿಕ್ಷುಕನೊಬ್ಬನಿಗೆ ತನ್ನ ಟಿಫಿನ್ ಬಾಕ್ಸ್‌ನಲ್ಲಿದ್ದ ಊಟವನ್ನು ನೀಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯ ಕಾರ್ಯಕ್ಕೆ ನೆಟ್ಟಿಗರು ಮನಸೋತು ಪ್ರಶಂಸೆಯ ಸುರಿಮಳೆ ಹರಿಸುತ್ತಿದ್ದಾರೆ.
queen_of_valley ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ವಿದ್ಯಾರ್ಥಿಯೊಬ್ಬಳು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಮೊದಲು ಹಣ ಕೊಟ್ಟು, ನಂತರ ತನ್ನ ಬಾಕ್ಸ್‌ನಲ್ಲಿದ್ದ ಆಹಾರವನ್ನು ಆತನಿಗೆ ತಿನಿಸಿರುವ ದೃಶ್ಯ ಸೆರೆಯಾಗಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಬಾಲಕಿಯ ಕಾಯಕ್ಕೆ ಶಬ್ಬಾಸ್‌ಗಿರಿಯನ್ನು ನೀಡಿದ್ದಾರೆ.