ವಿಚಾರಕ್ಕಿಲ್ಲ ಅವಕಾಶ: ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ ಸುಭಾಷ್ ಚಂದ್ರ ಬೋಸ್ ರ ಮರಿ ಮೊಮ್ಮಗ - Mahanayaka
11:32 AM Wednesday 12 - March 2025

ವಿಚಾರಕ್ಕಿಲ್ಲ ಅವಕಾಶ: ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ ಸುಭಾಷ್ ಚಂದ್ರ ಬೋಸ್ ರ ಮರಿ ಮೊಮ್ಮಗ

07/09/2023

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.
ಬಿಜೆಪಿ ನಾಯಕರು ನನ್ನ ವಿಚಾರವನ್ನು ಪ್ರಚಾರ ಮಾಡುವ ಭರವಸೆ ನೀಡಿದ್ದರು. ಆದರೆ ಅದ್ಯಾವುದಕ್ಕೂ ಬಿಜೆಪಿ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿರುವ ಚಂದ್ರಕುಮಾರ್‌ ಬೋಸ್‌ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ವಿದಾಯ ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಬಿಜೆಪಿಯಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಬಂಗಾಳದ ಜನರನ್ನು ತಲುಪಲು ಕಾರ್ಯತಂತ್ರವನ್ನು ಸೂಚಿಸುವ ವಿವರವಾದ ಪ್ರಸ್ತಾಪವನ್ನು ನಾನು ಮುಂದಿಟ್ಟಿದ್ದೆ. ಆದರೆ ಇದನ್ನು ನಿರ್ಲಕ್ಷಿಸಲಾಗಿದೆ.

ಹೀಗಾಗಿ ನಾನು ಬಿಜೆಪಿಯ ಸದಸ್ಯನಾಗಿ ಮುಂದುವರಿಯುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಚಂದ್ರಕುಮಾರ್ ಬೋಸ್, 2016 ರಲ್ಲಿ ಬಿಜೆಪಿ2016 ರಲ್ಲಿ ವಿಧಾನಸಭೆ ಚುನಾವಣೆಗೆ ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2016ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಬೋಸ್ ಅವರನ್ನು 2020ರಲ್ಲಿ ಪಕ್ಷ ಪುನರ್ ರಚನೆ ಸಮಯದಲ್ಲಿ ಕೈಬಿಟ್ಟಿತ್ತು.


Provided by

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ, ಮಾರ್ಗದರ್ಶಕ ಮತ್ತು ಒಡನಾಡಿಯಾಗಿದ್ದ ನನ್ನ ಅಜ್ಜ ಶರತ್ ಚಂದ್ರ ಬೋಸ್ ಅವರ 134 ನೇ ಜನ್ಮ ವಾರ್ಷಿಕೋತ್ಸವದಂದು ನಾನು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿ