ಮಹಿಳೆಯರು, ಪ.ಜಾತಿ, ಬುಡಕಟ್ಟು ಜನರ ವಿರುದ್ಧದ ಸನಾತನ ಧರ್ಮದ ತಾರತಮ್ಯದ ವಿರುದ್ಧ ಉದಯನಿಧಿ ಮಾತನಾಡಿದ್ದಾರೆ: ಎಂ.ಕೆ.ಸ್ಟಾಲಿನ್ ಸ್ಪಷ್ಟನೆ
ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದಲ್ಲಿ ಬೋಧಿಸಲಾದ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಅಮಾನವೀಯ ತತ್ವಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅಪರಾಧ ಮಾಡುವ ಉದ್ದೇಶವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರನ್ನು ಗುರಿಯಾಗಿಸಿ ಪ್ರಧಾನಿ ನರೇಂದ್ರ ಮೋದಿ ನಡೆಸಿರುವ ವಾಗ್ದಾಳಿಯನ್ನು ಖಂಡಿಸಿರುವ ಸ್ಟಾಲಿನ್, ದಬ್ಬಾಳಿಕೆಯ ತತ್ವಗಳ ವಿರುದ್ಧದ ಅವರ ನಿಲುವನ್ನು ಸಹಿಸಲಾಗದ ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿ, ಸನಾತನ ಚಿಂತನೆಯ ಜನರ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಆರೋಪಿಸಿ ಅಪಪ್ರಚಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ಸನಾತನ ಸಂಸ್ಥೆಯು ಬೋಧಿಸಿದ ಅಮಾನವೀಯ ತತ್ವಗಳ ಬಗ್ಗೆ ಕೆಲವು ಹೇಳಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಪೋಷಿಸಲ್ಪಟ್ಟ ಸುಳ್ಳು ಸಾಮಾಜಿಕ ಮಾಧ್ಯಮ ಗುಂಪು ಉತ್ತರದ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದೆ. ಉದಯನಿಧಿ ಅವರು ತಮಿಳು ಅಥವಾ ಇಂಗ್ಲಿಷ್ನಲ್ಲಿ ‘ಜನಾಂಗೀಯ ಹತ್ಯೆ’ ಎಂಬ ಪದವನ್ನು ಎಂದಿಗೂ ಬಳಸಲಿಲ್ಲ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಟೀಕಾಕಾರರೊಂದಿಗೆ ಏಕೆ ಸೇರುತ್ತಿದ್ದಾರೆ? ಅವರ ಉದ್ದೇಶವೇನು ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಸನಾತನ ಧರ್ಮ(ಬ್ರಾಹ್ಮಣ್ಯ)ದ ಕುರಿತು ಮಾತನಾಡಿದ್ದ ಉದಯನಿಧಿ ಉದಯನಿಧಿ ಸ್ಟಾಲಿನ್, ಸನಾತನವನ್ನು ವಿರೋಧಿಸಬಾರದು ಅದನ್ನು ಡೆಂಗ್ಯೂ, ಮಲೇರಿಯಾ, ಕೊರೋನಾ ರೋಗದಂತೆಯೇ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ ನಂತರ ದೇಶಾದ್ಯಂತ ಬ್ರಾಹ್ಮಣ್ಯ ಸಿದ್ಧಾಂತ ಪರ ಸಂಘಟನೆ ಹಾಗೂ ಪಕ್ಷ ಉದಯನಿಧಿ ಸ್ಟಾಲಿನ್ ವಿರುದ್ಧ ಮುಗಿಬಿದ್ದಿದ್ದು, ಕೆಲವರು ಬಹಿರಂಗವಾಗಿ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ.