ಬಂಗಾಳದಲ್ಲಿದ್ದ ಬಿಜೆಪಿ ಭದ್ರಕೋಟೆಯನ್ನು ಕಸಿದುಕೊಂಡ ತೃಣಮೂಲ ಕಾಂಗ್ರೆಸ್: 'ಈ ಗೆಲುವು ಐತಿಹಾಸಿಕ' ಎಂದ ದೀದಿ - Mahanayaka
3:43 AM Friday 20 - September 2024

ಬಂಗಾಳದಲ್ಲಿದ್ದ ಬಿಜೆಪಿ ಭದ್ರಕೋಟೆಯನ್ನು ಕಸಿದುಕೊಂಡ ತೃಣಮೂಲ ಕಾಂಗ್ರೆಸ್: ‘ಈ ಗೆಲುವು ಐತಿಹಾಸಿಕ’ ಎಂದ ದೀದಿ

08/09/2023

ತೃಣಮೂಲ ಕಾಂಗ್ರೆಸ್ ಶುಕ್ರವಾರ ಧುಪ್ಗುರಿ ವಿಧಾನಸಭಾ ಸ್ಥಾನವನ್ನು ಬಿಜೆಪಿ ಪಕ್ಷದಿಂದ ಕಸಿದುಕೊಂಡಿದೆ. ಈ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇದನ್ನು ಟಿಎಂಸಿಯಿಂದ ಕಸಿದುಕೊಂಡಿತ್ತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಧುಪ್ಗುರಿ ಗೆಲುವನ್ನು “ಐತಿಹಾಸಿಕ” ಎಂದು ಕರೆದಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಮತ್ತು ಮಂತ್ರಿಗಳ ಪ್ರಚಾರದ ಹೊರತಾಗಿಯೂ ಜನರು ಟಿಎಂಸಿಗೆ ಮತ ಚಲಾಯಿಸಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್ ‌ನಲ್ಲಿ ಮಮತಾ ಬ್ಯಾನರ್ಜಿ, “ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ವಿಧಾನಸಭಾ ಕ್ಷೇತ್ರದ ನಿರ್ಣಾಯಕ ಉಪಚುನಾವಣೆಯಲ್ಲಿ ನಮ್ಮ ಪರವಾಗಿ ನಿರ್ಣಾಯಕವಾಗಿ ಮತ ಚಲಾಯಿಸಿದ್ದಕ್ಕಾಗಿ ಧುಪ್ಗುರಿಯ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಉತ್ತರ ಬಂಗಾಳದ ಜನರು ನಮ್ಮೊಂದಿಗೆ ಇದ್ದಾರೆ. ನಮ್ಮ ಬೆಳವಣಿಗೆ, ಮತ್ತು ಸಬಲೀಕರಣದ ಕಾರ್ಯತಂತ್ರವನ್ನು ನಂಬುತ್ತಾರೆ. ಬಂಗಾಳವು ತನ್ನ ಜನಾದೇಶವನ್ನು ತೋರಿಸಿದೆ. ಶೀಘ್ರದಲ್ಲೇ ಭಾರತವೂ ತನ್ನ ಪವರನ್ನು ತೋರಿಸುತ್ತದೆ. ಜೈ ಬಾಂಗ್ಲಾ’ ಎಂದಿದ್ದಾರೆ.


Provided by

 

ಉತ್ತರ ಪ್ರದೇಶದ ಘೋಸಿ, ಜಾರ್ಖಂಡ್ ನ ಡುಮ್ರಿ ಮತ್ತು ಕೇರಳದ ಪುತ್ತುಪಲ್ಲಿ ವಿಧಾನಸಭಾ ಸ್ಥಾನಗಳಲ್ಲಿ ಟಿಎಂಸಿ ಗೆಲುವು ಸಾಧಿಸಿದ ಬಿಜೆಪಿಗೆ ಸವಾಲಾಗಿದೆ. ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಮಮತಾ ಅಭಿನಂದಿಸಿದರು.

ಇತ್ತೀಚಿನ ಸುದ್ದಿ