ನವರಾತ್ರಿ ದುರ್ಗೆಗೆ ಪೂಜೆ ಸಲ್ಲಿಸಿ ಮನಗೆ ಬರುತ್ತಿದ್ದ ಯುವತಿಯ ಸಾಮೂಹಿಕ ಅತ್ಯಾಚಾರ! - Mahanayaka
7:59 PM Saturday 21 - December 2024

ನವರಾತ್ರಿ ದುರ್ಗೆಗೆ ಪೂಜೆ ಸಲ್ಲಿಸಿ ಮನಗೆ ಬರುತ್ತಿದ್ದ ಯುವತಿಯ ಸಾಮೂಹಿಕ ಅತ್ಯಾಚಾರ!

23/10/2020

ಲಕ್ನೋ: ಅತ್ಯಾಚಾರಿಗಳ ಸ್ವರ್ಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ನಡೆದಿದ್ದು, ನವರಾತ್ರಿ ಪ್ರಯುಕ್ತ ದುರ್ಗೆಗೆ ಪೂಜೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದ 19 ವರ್ಷದ ಯುವತಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಉತ್ತರಪ್ರದೇಶದ ಮಹೊಬಾ ಜಿಲ್ಲೆಯ ಪಾನ್ವಾಡಿ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. ನವರಾತ್ರಿಯ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಮೂವರು ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಘಟನೆ ನಡೆದ ದಿನವೇ ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ