ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ: ಸಂಸದ ಪ್ರತಾಪ್ ಸಿಂಹ ಹೇಳಿಕೆ
09/09/2023
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಚಾಮುಂಡೇಶ್ವರಿ ದರ್ಶನ ಪಡೆಯಲು ಬೆಟ್ಟಕ್ಕೆ ಬರುತ್ತಾರೆ. ಆಸ್ತಿಕರಿಗೆ ಚಾಮುಂಡೇಶ್ವರಿ ಇದ್ದಾಳೆ, ನಾಸ್ತಿಕರಿಗೆ ಬೇರೆಯವರು ಇರಬಹುದು, ನೀವು ನಿಮ್ಮ ಮನೆಗಳಲ್ಲಿಯೇ ಮಹಿಷಾ ದಸರಾ ಮಾಡಿ ಪೂಜೆ ಮಾಡಿ, ನಿನ್ನಂತಹ ಮಗನನ್ನೇ ಕೊಡಪ್ಪ ಎಂದು ಬೇಡಿಕೊಳ್ಳಿ ಎಂದು ಅವರು ವ್ಯಂಗ್ಯವಾಡಿದರು.
ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರಿಗೆ ನೇರವಾಗಿ ಹೇಳುತ್ತೇನೆ ಇದಕ್ಕೆ ಅವಕಾಶ ಕೊಡಬಾರದು, ಸಂಘರ್ಷವಾದರೂ ಪರವಾಗಿಲ್ಲ ತಡೆಯುತ್ತೇವೆ ಎಂದು ಅವರು ಸವಾಲು ಹಾಕಿದರು.