ಐಎಸ್ ಪಿಆರ್ ಎಲ್ ಯೋಜನೆಯ ಸಂತ್ರಸ್ತರಿಗೆ ವಸತಿ: ಡಿಸಿಯಿಂದ ಸ್ಥಳ ಪರಿಶೀಲನೆ
16/09/2023
ಕಾಪು: ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್(ಐಎಸ್ ಪಿಆರ್ ಎಲ್) ಎರಡನೆ ಹಂತದ ಯೋಜನೆಯಡಿ ವಸತಿ ಕಳೆದುಕೊಂಡವರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಇಂದು ಪಾದೂರು, ಹೇರೂರು, ಶಿರ್ವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಜೂರು ಗ್ರಾಪಂ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮಜೂರು ಗ್ರಾಪಂ ಸದಸ್ಯರಾದ ಮಧುಸೂದನ್, ಸುರೇಂದ್ರ ಜೈನ್, ಸಂದೀಪ್ ಹಾಗೂ ಕುಂದಾಪುರ ಸಹಾಯಕ ಆಯುಕ್ತ ರಶ್ಮಿ, ಕಾಪು ತಹಶೀಲ್ದಾರ್ ನಾಗರಾಜ್ ನಾಯ್ಕ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.