ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ | ಈ ಬಾರಿ ದೆಹಲಿಯತ್ತ ಪ್ರಯಾಣಿಸಲಿವೆ 40 ಲಕ್ಷ ಟ್ರ್ಯಾಕ್ಟರ್! - Mahanayaka
11:16 PM Wednesday 11 - December 2024

ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ | ಈ ಬಾರಿ ದೆಹಲಿಯತ್ತ ಪ್ರಯಾಣಿಸಲಿವೆ 40 ಲಕ್ಷ ಟ್ರ್ಯಾಕ್ಟರ್!

07/02/2021

ನವದೆಹಲಿ: ಟೆಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ರೈತ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹರ್ಯಾಣದ ಜಿಂದ್ ಜಿಲ್ಲೆಯ ಕರ್ಮವೀರ್ ಸಿಂಗ್(52) ಆತ್ಮಹತ್ಯೆಗೆ ಶರಣಾದ ರೈತ ಆಗಿದ್ದು, ಹರ್ಯಾಣದ ಚರಕಿ ದಾದ್ರಿ ಮೈದಾನದಲ್ಲಿ ಈ ಘಟನೆ ನಡೆದಿದೆ. ತನ್ನ ಸಾವಿನ ಕುರಿತು ಡೆತ್ ನೋಟ್ ಬರೆದಿರುವ ಕರ್ಮವೀರ್ ಸಿಂಗ್, “ಭಾರತ್ ಕಿಸಾನ್ ಯೂನಿಯನ್ ಜಿಂದಾಬಾದ್, ಸಮಸ್ಯೆ ಇತ್ಯರ್ಥಗೊಳಿಸದ ಮೋದಿ ಸರ್ಕಾರ ದಿನಾಂಕಗಳ ಮೇಲೆ ದಿನಾಂಕ ನೀಡುತ್ತಲೇ ಹೋಗುತ್ತಿದೆ.  ಈ ಕಾನೂನು ಹಿಂಪಡೆಯುವ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ ಎಂದು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಮಹಾಪಂಚಾಯತ್ ಗೂ ಮೊದಲು ಕರ್ಮವೀರ್ ಸಿಂಗ್ ಸಿಂಗ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕರ್ಮವೀರ್ ಸಿಂಗ್ ಅವರ ಆತ್ಮಹತ್ಯೆಯ ಹಿನ್ನೆಲೆತಯಲ್ಲಿ ರೈತರ ಪ್ರತಿಭಟನೆ ಮತ್ತೆ ಬಲಗೊಂಡಿದ್ದು,  ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್, 2021ರ ರೈತ ಕ್ರಾಂತಿಗೆ ಕರೆ ನೀಡಿದ್ದಾರೆ.

ಜನವರಿ 26ರಂದು 20 ಸಾವಿರ ಟ್ರಾಕ್ಟರ್ ಸೇರಿಸುವುದು ನಮ್ಮ ಗುರಿಯಾಗಿತ್ತು. ಆದರೆ, 2021ರ ಕಿಸಾನ್ ಕ್ರಾಂತಿಗೆ ಎಲ್ಲರೂ ಸಿದ್ಧರಾಗಬೇಕು. ಈ ಬಾರಿ 40 ಲಕ್ಷ ಟ್ರಾಕ್ಟರ್ ಗಳ ಪರೇಡ್ ನಡೆಸುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ