SDPI ಸಂಗಬೆಟ್ಟು ಬ್ಲಾಕ್ ಸಮಾಗಮ-2023 - Mahanayaka

SDPI ಸಂಗಬೆಟ್ಟು ಬ್ಲಾಕ್ ಸಮಾಗಮ–2023

sdpi
20/09/2023

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಕೈಗೊಂಡ ಅಭಿಯಾನವಾದ ಬ್ಲಾಕ್ ಸಮಾಗಮ ಸಂಗಬೆಟ್ಟು ಬ್ಲಾಕ್ ಅಧ್ಯಕ್ಷರಾದ ನೌಶಾದ್ ಕಲಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


Provided by

ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ನಝೀರ್ ಟೆಂತ್ ಮೈಲ್, ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೂನಿಷ್ ಆಲಿ, ಉಪಾಧ್ಯಕ್ಷರಾದ ಅನ್ವರ್ ಬಡಕಬೈಲ್, ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ತಲಪಾಡಿ ಆಗಮಿಸಿದ್ದರು.

ದ. ಕ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪಕ್ಷದ ಕಾರ್ಯ ಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ಮಾತನಾಡಿ, ಎಲ್ಲಾ ಪದಾಧಿಕಾರಿಗಳು, ನಾಯಕರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಪಕ್ಷವನ್ನು ಬಲಿಷ್ಠಗೊಳಿಸಲು ನಾಯಕರು, ಕಾರ್ಯಕರ್ತರು ಪಣ ತೊಡಗಬೇಕೆಂದು ಕರೆನೀಡಿದರು. ಜಿಲ್ಲಾ ಸಮಿತಿ ಸದಸ್ಯರಾದ ನಝೀರ್ ಟೆಂತ್ ಮೈಲ್ ಅವರು ಸಮಾರೋಪ ಭಾಷಣ ಮಾಡಿದರು.


Provided by

ಈ ಸಂದರ್ಭದಲ್ಲಿ ಬ್ಲಾಕ್ ಸಮಿತಿ ಪದಾಧಿಕಾರಿಗಳು ಮತ್ತು ಬೂತ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಗಬೆಟ್ಟು ಬ್ಲಾಕ್ ಸಮಿತಿ ಅಧ್ಯಕ್ಷರಾದ ನೌಶಾದ್ ಕಲಾಯಿ ಸ್ವಾಗತಿಸಿ, ಕಾರ್ಯದರ್ಶಿ ಜುನೈದ್ ಬಡಕಬೈಲ್ ಧನ್ಯವಾದಗೈದರು.

ದ.ಕ ಜಿಲ್ಲಾ ನಾಯಕರಿಂದ SDPI ಕಲಾಯಿ ಕಾರ್ಯಕರ್ತ ಶಹೀದ್ ಅಶ್ರಫ್ ಕಲಾಯಿ ಅವರ ಕಬರ್ ಸಂದರ್ಶನವನ್ನು ಮಾಡಿದರು.

ಇತ್ತೀಚಿನ ಸುದ್ದಿ