ರಸ್ತೆ ಮಧ್ಯೆ ಕೆಟ್ಟು ನಿಂದ ಕೆಎಸ್ ಆರ್ ಟಿಸಿ ಬಸ್: ಪ್ರಯಾಣಿಕರಿಗೆ ನೆರವಾದ ಶಾಸಕಿ ನಯನಾ ಮೋಟಮ್ಮ - Mahanayaka

ರಸ್ತೆ ಮಧ್ಯೆ ಕೆಟ್ಟು ನಿಂದ ಕೆಎಸ್ ಆರ್ ಟಿಸಿ ಬಸ್: ಪ್ರಯಾಣಿಕರಿಗೆ ನೆರವಾದ ಶಾಸಕಿ ನಯನಾ ಮೋಟಮ್ಮ

mudigere
21/09/2023

ಕೊಟ್ಟಿಗೆಹಾರ: ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ತುಂಬಿದ ಪ್ರಯಾಣಿಕರ ಘನ ಭಾರದಿಂದ ಬಸ್ ನ ಪರ್ಚ್ ಕಟ್ ಆಗಿ ಜಾವಳಿ ಕೆಳಗೂರು ಮಾರ್ಗ ಮಧ್ಯೆ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದರು.


Provided by

ಶಕ್ತಿ ಯೋಜನೆಯ ಹಿನ್ನಲೆಯಲ್ಲಿ ಬಸ್ ನಲ್ಲಿ 90 ಕ್ಕೂ ಅಧಿಕ ಮಂದಿ ಗಂಡಸರು ಮಹಿಳೆಯರು ಶಾಲಾ ಮಕ್ಕಳು ಸೇರಿದಂತೆ ಹಲವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.

ನೆರವಿಗೆ ಬಂದ ಶಾಸಕಿ:


Provided by

ಈ ಮಾರ್ಗ ಮಧ್ಯೆ ಸುಂಕಸಾಲೆಯಲ್ಲಿ ಕಾರ್ಯಕ್ರಮ ಮುಗಿಸಿ ಬರುವಾಗ ಬಸ್ ಕೆಟ್ಟು ನಿಂತು ನೋಡಿ ಕಾರು ನಿಲ್ಲಿಸಿ ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದರು.ಬಳಿಕ ಬಸ್ ಬಗ್ಗೆ ಚಾಲಕರಲ್ಲಿ ವಿಚಾರಿಸಿದಾಗ ಕೆಟ್ಟು ನಿಂತಿರುವುದು ಗಮನಕ್ಕೆ ಬಂದು ಕೂಡಲೇ ಶಾಸಕಿ ನಯನಾ ಮೋಟಮ್ಮ ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಪೋನ್ ಮಾಡಿ ಬೇರೆ ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ನೆರವಾದರು.

ಇತ್ತೀಚಿನ ಸುದ್ದಿ