ಕಾವೇರಿ ನೀರಿನ ಹಂಚಿಕೆ: ಸಂಕಷ್ಟ ಹಂಚಿಕೆ ಸೂತ್ರ ಅನಿವಾರ್ಯ: ಸಚಿವ ಎನ್. ಚಲುವರಾಯಸ್ವಾಮಿ - Mahanayaka

ಕಾವೇರಿ ನೀರಿನ ಹಂಚಿಕೆ: ಸಂಕಷ್ಟ ಹಂಚಿಕೆ ಸೂತ್ರ ಅನಿವಾರ್ಯ: ಸಚಿವ ಎನ್. ಚಲುವರಾಯಸ್ವಾಮಿ

cheluva kumara swamy
22/09/2023

ಬೆಂಗಳೂರು: ಸಂಕಷ್ಟ ಪರಿಸ್ಥಿತಿಯಲ್ಲಿ ನೀರಿನ ಹಂಚಿಕೆ ಸೂತ್ರ ರೂಪಿಸದೇ ಇರುವುದರಿಂದ ಕಾವೇರಿ ವಿಚಾರ ರಾಜ್ಯವನ್ನು ತೀವ್ರ ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಹೆಬ್ಬಾಳದಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತ ಮತ್ತು ನಾಮ ನಿರ್ದೇಶಿತ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ರಚಿಸಿದ ನಂತರ ಕೇಂದ್ರ ಅಥವಾ ಸಿ.ಡಬ್ಲ್ಯೂ ಎಂ ಎ. ಬರ ಪರಿಸ್ಥಿತಿಯಲ್ಲಿ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕೊರತೆ ಇರುವ ಸಂದರ್ಭದಲ್ಲಿ ಯಾವ ಮಾನ ದಂಡಗಳನ್ನು ಅನುಸರಿಸಬೇಕು ಎಂಬ ಸೂತ್ರವೇ ಸಿದ್ದಪಡಿಸಿಲ್ಲ ಹಾಗಾಗಿ ಕರ್ನಾಟಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರ ಆವರಿಸಿದೆ . 195 ಜಿಲೆಗಳಲ್ಲಿ ಬರ ಘೋಷಣೆ ಮಾಡಲಾಗಿದ್ದು ಪರಿಹಾಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತಿದೆ . ರಾಜ್ಯ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ದವಾಗಿದೆ ಎಂದರು.
ಕೃಷಿ ವಿದ್ಯಾರ್ಥಿಗಳು ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಹಾಗೂ ಇತರ ಕೃಷಿಕರಿಗೂ ಶಕ್ತಿ ತುಂಬುವಂತಾಗಬೇಕು ಎಂದು ಸಚಿವರು ಕರೆ ನೀಡಿದರು.

ಕೃಷಿ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಪ್ರತಿ ವರ್ಷ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿರುವುದು ಅಭಿನಂದನಾರ್ಹ ಎಂದರು.ಇದೇ ವೇಳೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಹಾಗೂ ನಾಮ ನಿರ್ದೇಶಿತ ಸದಸ್ಯರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಮಾತನಾಡಿ, ಬರಗಾಲದಂತ ಸಂಧರ್ಭದಲ್ಲಿ ಕೃಷಿಗೆ ಪೂರಕವಾಗಿ, ಕೃಷಿಕರ ಹಿತಕ್ಕಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ,ಅನುಷ್ಠಾನಗೊಳಿಸುವ ಮೂಲಕ ರೈತರ ಸಂಕಷ್ಟಕ್ಕೆ ಕೃಷಿ ವಿವಿಗಳು ಸ್ಪಂದಿಸುತ್ತಿವೆ ಎಂದರು.

ಇತ್ತೀಚಿನ ಸುದ್ದಿ