ಉದ್ಘಾಟನೆಗಾಗಿ ಕಾಯಬೇಡಿ: ವ್ಯಕ್ತಿ ನೆರವಿಗೆ ಆ್ಯಂಬುಲೆನ್ಸ್ ಕಳುಹಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ - Mahanayaka
6:04 PM Wednesday 30 - October 2024

ಉದ್ಘಾಟನೆಗಾಗಿ ಕಾಯಬೇಡಿ: ವ್ಯಕ್ತಿ ನೆರವಿಗೆ ಆ್ಯಂಬುಲೆನ್ಸ್ ಕಳುಹಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

chamarajanagara
23/09/2023

ಚಾಮರಾಜನಗರ: ಉದ್ಘಾಟನೆಗಾಗಿ ಕಾಯುತ್ತಿದ್ದ ಆ್ಯಂಬುಲೆನ್ಸ್ ನ್ನು ವ್ಯಕ್ತಿ ನೆರವಿಗೆ ಆರೋಗ್ಯ ಸಚಿವ ತುರ್ತಾಗಿ ಕಳುಹಿಸಿದ ಘಟನೆ ಶುಕ್ರವಾರ ಹನೂರಿನಲ್ಲಿ ನಡೆದಿದೆ.

ಪ್ರತಿಯೊಂದಕ್ಕೂ ಸಚಿವರಿಂದ ಉದ್ಘಾನೆಯಾಗಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ವಿಶೇಷವಾಗಿ ಆರೋಗ್ಯ ವಿಚಾರಗಳಲ್ಲಿ ಉದ್ಘಾಟನೆಗಿಂತ ಜನರ ಸಂಕಷ್ಟಗಳಿಗೆ ಮೊದಲು ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿ ಉದ್ಘಾಟಿಸಲು ತರುತ್ತಿದ್ದ ನೂತನ ಅಂಬುಲೆನ್ಸ್ನ್ನು ಮಾರ್ಗ ಮಧ್ಯದಲ್ಲಿಯೇ ವಾಪಸ್ ಕಳುಹಿಸಿದ್ದಾರೆ.

ಆದಿವಾಸಿಗಳ ಅನುಕೂಲಕ್ಕಾಗಿ ಸಿಎಸ್.ಆರ್ ಯೋಜನೆಯಡಿ ಆಕ್ಸಾ ಬಿಸಿನೆಸ್ ಸರ್ವೀಸ್ ನವರು ಆದಿವಾಸಿಗಳ ಆರೋಗ್ಯ ಸಂಶೋಧನಾ ಕೇಂದ್ರಕ್ಕೆ ಅಂಬುಲೆನ್ಸ್ ಒದಗಿಸಿದ್ದರು. ಚಾಮರಾಜನಗರ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ಅಂಬುಲೆನ್ಸ್ ನ್ನು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಗೆ ಹಸ್ತಾಂತರಿಸಬೇಕಿತ್ತು. ಸಚಿವರಿಂದ ಚಾಲನೆ ಕೊಡಿಸಲು ಅಂಬುಲೆನ್ಸ್ ನ್ನು ಕೊಳ್ಳೆಗಾಲಕ್ಕೆ ತರಲಾಗುತ್ತಿತ್ತು. ಇದೇ ವೇಳೆ ಗೊಂಬೆಗಲ್ಲು ಭಾಗದಲ್ಲಿ ಆನೆದಾಳಿಯಾಗಿ ವ್ಯಕ್ತಿಯೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಕರೆ ಬಂದಿದ್ದರಿಂದ ಅಂಬುಲೆನ್ಸ್ ನ್ನು ಆನೆ ದಾಳಿಯಾದ ಪ್ರದೇಶಕ್ಕೆ ಕಳಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ಉದ್ಘಾಟನೆಗಾಗಿ ಕೊಳ್ಳಗಾಲಕ್ಕೆ ಬರುತ್ತಿದ್ದ ಅಂಬುಲೆನ್ಸ್ ಅನ್ನ ಮಾರ್ಗ ಮಧ್ಯದಲ್ಲಿಯೇ ವಾಪಸ್ ಕಳುಹಿಸಿ, ಸಚಿವರಿಂದ ಉದ್ಘಾಟನೆಗಾಗಿ ತರುವ ಅಗತ್ಯವಿಲ್ಲ, ನೇರವಾಗಿ ಆನೆದಾಳಿ ನಡೆದ ಪ್ರದೇಶಕ್ಕೆ ಅಂಬುಲೆನ್ಸ್ ಸೇವೆ ಒದಗಿಸಿ ಆ ಮೂಲಕವೇ ಚಾಲನೆ ನೀಡಿ ಎಂದು ಹೇಳುವ ಮೂಲಕ ಸಿಬ್ಬಂದಿಗಳಿಗೆ ತುರ್ತು ಸ್ಪಂದನೆ ಪಾಠ ಮಾಡಿ ಮಾದರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ