2 ಸಾವಿರ ರೂಪಾಯಿ ನೋಟುಗಳನ್ನು ಇನ್ನೂ ಬದಲಾವಣೆ ಮಾಡಿಲ್ಲವೇ?:  ಸೆಪ್ಟೆಂಬರ್ 30 ಕೊನೆಯ ದಿನ! - Mahanayaka

2 ಸಾವಿರ ರೂಪಾಯಿ ನೋಟುಗಳನ್ನು ಇನ್ನೂ ಬದಲಾವಣೆ ಮಾಡಿಲ್ಲವೇ?:  ಸೆಪ್ಟೆಂಬರ್ 30 ಕೊನೆಯ ದಿನ!

notes
25/09/2023

ಮುಂಬೈ: ನೋಟು ಅಮಾನ್ಯದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗೆ ಹಿಂದಿರುಗಿಸಲು ಮೇ 23ರಂದು ಆರ್ ಬಿಐ ತಿಳಿಸಿತ್ತು.

ಇದೀಗ 2 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಗೆ ಹಿಂದಿರುಗಿಸಲು ಇನ್ನು ಕೇವಲ ಐದು ದಿನಗಳು ಬಾಕಿ ಉಳಿದಿವೆ. ಇನ್ನೂ ಕೂಡ 2 ಸಾವಿರ ರೂಪಾಯಿಗಳನ್ನು ಯಾರೆಲ್ಲ ಬದಲಾವಣೆ ಮಾಡಿಕೊಂಡಿಲ್ಲ, ಅಂತಹವರು ತಕ್ಷಣವೇ 2 ಸಾವಿರ ರೂಪಾಯಿ ನೋಟನ್ನು ತಕ್ಷಣವೇ ಬದಲಾವಣೆ ಮಾಡಿಕೊಳ್ಳಬಹುದು.

ಸದ್ಯ ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ನೋಟನ್ನು ಸೆಪ್ಟಂಬರ್ 30ರೊಳಗೆ ಬ್ಯಾಂಕ್ ನಲ್ಲಿ ಠೇವಣಿ ಇಡಲು ಅಥವಾ ಬೇರೆ ಮುಖಬೆಲೆ ಹೊಂದಿರುವ ನೋಟುಗಳೊಂದಿಗೆ ಬದಲಾಯಿಸಲು ಆರ್ ಬಿಐ ಸೂಚನೆ ನೀಡಿತ್ತು.

ಸೆಪ್ಟಂಬರ್ 30ರಂದು 2 ಸಾವಿರ ರೂಪಾಯಿ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಸಾಕಷ್ಟು ಜನರಿಗೆ ಈ ಮಾಹಿತಿ ಇನ್ನೂ ಲಭ್ಯವಾಗಿರುವುದಿಲ್ಲ, ಹಾಗಾಗಿ ಅಂತಹವರಿಗೆ ಸಾಧ್ಯವಾದಷ್ಟು ಈ ಮಾಹಿತಿಗಳನ್ನು ತಲುಪಿಸುವ ಅಗತ್ಯ ಕೂಡ ಇದೆ.

ಇತ್ತೀಚಿನ ಸುದ್ದಿ