2023ರಲ್ಲಿ ಶೇಕಡಾ 80ರಷ್ಟು ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು: ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಹೆಚ್ಚು ದ್ವೇಷ ಭಾಷಣ: ಹಿಂದೂತ್ವ ವಾಚ್ ಸತ್ಯಶೋಧನಾ ವರದಿ - Mahanayaka
8:17 PM Saturday 21 - September 2024

2023ರಲ್ಲಿ ಶೇಕಡಾ 80ರಷ್ಟು ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು: ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಹೆಚ್ಚು ದ್ವೇಷ ಭಾಷಣ: ಹಿಂದೂತ್ವ ವಾಚ್ ಸತ್ಯಶೋಧನಾ ವರದಿ

27/09/2023

2023 ರ ಇಸವಿಯ ಆರಂಭದಲ್ಲಿ ಪ್ರತಿದಿನ ಒಂದಕ್ಕಿಂತ ಹೆಚ್ಚು ದ್ವೇಷ ಭಾಷಣ ಅಥವಾ ಮುಸ್ಲಿಮರನ್ನು ಗುರಿಯಾಗಿಸಿದ ರ್ಯಾಲಿಗಳು ನಡೆದಿವೆ ಎಂದು ಹಿಂದುತ್ವ ವಾಚ್‌ ವರದಿ ಮಾಡಿದೆ.

2023 ರ ಮೊದಲ ಆರು ತಿಂಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಒಟ್ಟು 255 ದ್ವೇಷ ಭಾಷಣ ಸಭೆಗಳು ಅಥವಾ ರ್ಯಾಲಿಗಳು ನಡೆದಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು ವರದಿಯಾಗಿವೆ ಎಂದು ಹಿಂದುತ್ವ ವಾಚ್ ವರದಿ ಮಾಡಿದೆ.

ಬಿಜೆಪಿ ಆಡಳಿತ ಇರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 205 (ಶೇ. 80) ದ್ವೇಷ ಭಾಷಣದ ಘಟನೆಗಳು ನಡೆದಿವೆ ಎಂದು ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ತಂಡ ಹೇಳಿದೆ.
ಇನ್ನು ದ್ವೇಷ ಭಾಷಣದ ಘಟನೆಗಳು ಎಲ್ಲಿ ನಡೆದಿದೆ ಗೊತ್ತಾ..? ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಡೆದಿವೆ. ನಂತರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.


Provided by

ಉತ್ತರಾಖಂಡವು ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಈ ವರ್ಷ ಸುಮಾರು ಶೇಕಡಾ 5 ರಷ್ಟು ದ್ವೇಷ ಭಾಷಣದ ಪ್ರಕರಣಗಳು ವರದಿಯಾಗಿವೆ ಎಂದು ಹಿಂದುತ್ವ ವಾಚ್ ತಿಳಿಸಿದೆ.

2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಮುಸ್ಲಿಂ ವಿರೋಧಿ ಭಾಷಣ ಮಾಡುವ ಪ್ರವೃತ್ತಿ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಈ ವರ್ಷ ದಾಖಲೆಯಾದ ಘಟನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಆಡಳಿತಾರೂಢ ಬಿಜೆಪಿ ಮತ್ತು ಬಜರಂಗದಳ ಸೇರಿದಂತೆ ಸಂಘಪರಿವಾರದಿಂದಲೇ ನಡೆದಿರುವುದನ್ನು ವರದಿಯು ಕಂಡುಹಿಡಿದಿದೆ. ಹಿಂದುತ್ವ ವಾಚ್ 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ ವರದಿ ತಯಾರಿಸಿದೆ.

ಬಿಜೆಪಿಗೆ ಚುನಾವಣೆಗಳು ಮಾತ್ರ ವೇಗವರ್ಧಕವಲ್ಲ. ರಾಮನವಮಿಯಂತಹ ಹಿಂದೂ ಹಬ್ಬಗಳ ಸಂದರ್ಭದಲ್ಲಿ ದ್ವೇಷದ ಘಟನೆಗಳು ಮತ್ತು ದ್ವೇಷ ಭಾಷಣಗಳು ಹೆಚ್ಚಿವೆ ಎಂದು ವರದಿ ಹೇಳಿದೆ.

‘2023 ರ ಅರ್ಧವಾರ್ಷಿಕ ವರದಿ: ಭಾರತದಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಘಟನೆಗಳು’ ಅನ್ನು ಆನ್ ಲೈನ್ ನಲ್ಲಿ ದ್ವೇಷದ ಕುರಿತಾದ ಘಟನೆಗಳ ಟ್ರ್ಯಾಕಿಂಗ್ ಮಾಡುವ ಪೋರ್ಟಲ್ ಹಿಂದುತ್ವ ವಾಚ್ ಗಾಗಿ ರಾಕಿಬ್ ಹಮೀದ್ ನಾಯಕ್, ಆರುಷಿ ಶ್ರೀವಾಸ್ತವ ಮತ್ತು ಅಭ್ಯುದಯ ತ್ಯಾಗಿ ಅವರು ಈ ವರದಿ ಬರೆದಿದ್ದಾರೆ.

ಇತ್ತೀಚಿನ ಸುದ್ದಿ