ಒಂದು ಫೋನ್ ಕರೆ 11 ಕಾರ್ಮಿಕರ ಜೀವ ಉಳಿಸಿತು! - Mahanayaka
3:56 PM Thursday 12 - December 2024

ಒಂದು ಫೋನ್ ಕರೆ 11 ಕಾರ್ಮಿಕರ ಜೀವ ಉಳಿಸಿತು!

08/02/2021

ಜೋಶಿಮಠ: ಆ ಒಂದು ಫೋನ್ ಕಾಲ್ 11 ಕಾರ್ಮಿಕರನ್ನು ರಕ್ಷಿಸಿತು. ಹೌದು… ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದ ಪರಿಣಾಮ ಸಾವಿನ ಅಂಚಿನಲ್ಲಿದ್ದ ಕಾರ್ಮಿಕರು. ಇದೇ ತಮ್ಮ ಕೊನೆಯ ದಿನ ಎಂದು ಭಾವಿಸಿದ್ದರು.

ಈ 11 ಕಾರ್ಮಿಕರು ತಪೋವನ ಬಳಿಯ ಸುರಂಗದಲ್ಲಿ ಸಿಲುಕಿದ್ದರು. ಆ ಸಂದರ್ಭದಲ್ಲಿ ಕಾರ್ಮಿಕರೊಬ್ಬರು ತಮ್ಮ ಮೊಬೈಲ್ ಫೋನ್ ಕೆಲಸ ಮಾಡುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.  ತಕ್ಷಣವೇ ಅವರು ರಕ್ಷಣಾ ತಂಡವನ್ನು ಸಂಪರ್ಕಿಸಿ ಸುರಂಗದಿಂದ ಮೇಲಕ್ಕೆ ಬಂದಿದ್ದಾರೆ.

ಸುರಂಗದಿಂದ ಮೇಲೆ ಬರುತ್ತಿದ್ದಂತೆಯೇ ನೀರು ಮತ್ತು ಭಾರೀ ಪ್ರಮಾಣದ ಹೂಳೂ ನಮ್ಮ ಮೇಲೆಯೇ ನಮ್ಮ ಮೇಲೆಯೇ ನುಗ್ಗಿದೆ. ಆಗಲೇ ನಮ್ಮನ್ನು ರಕ್ಷಣಾ ತಂಡ ರಕ್ಷಿಸಿದೆ ಎಂದು ರಕ್ಷಿಸಲ್ಪಟ್ಟ ಕಾರ್ಮಿಕ ಲಾಲ್ ಬಹದ್ದೂರ್ ಹೇಳಿದ್ದಾರೆ.

11 ಮಂದಿ ಕಾರ್ಮಿಕರನ್ನು ಇಂಡೋ- ಟಿಬಿಟಿಯನ್ ಗಡಿ ಪೊಲೀಸರು ಸೋಮವಾರ ಸಂಜೆ ಚಿಮೋಲಿ ಜಿಲ್ಲೆಯ ಸುರಂಗದಿಂದ ಮೇಲಕೆತ್ತಿ ರಕ್ಷಿಸಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಏಳು ಗಂಟೆಗಳ ಕಾಲ ಸತತವಾಗಿ ಕಾರ್ಯಾಚರಣೆ ನಡೆಸಿ, ಸುರಂಗದಲ್ಲಿ ಸಿಲುಕಿದವನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಗೆ ಒಂದು ಮೊಬೈಲ್ ಕರೆ ಸಹಕಾರಿಯಾಯಿತು.

ಇತ್ತೀಚಿನ ಸುದ್ದಿ