ಮಹೇಶ್ ಮೋಟಾರ್ಸ್‌ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆಗೆ ಶರಣು - Mahanayaka
1:08 PM Tuesday 17 - December 2024

ಮಹೇಶ್ ಮೋಟಾರ್ಸ್‌ ಮಾಲಕ ಪ್ರಕಾಶ್ ಶೇಖ ಆತ್ಮಹತ್ಯೆಗೆ ಶರಣು

praksh shekha
01/10/2023

ಮಂಗಳೂರು: ಮಹೇಶ್ ಮೋಟಾರ್ಸ್‌ ಇದರ ಮಾಲಕ ಪ್ರಕಾಶ್ ಶೇಖ ಅವರು ಮಂಗಳೂರು ನಗರದ ಕದ್ರಿಯ ಅಪಾರ್ಟ್‌ಮೆಂಟ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪ್ರಕಾಶ್ ಅವರ ಅಕಾಲಿಕ ನಿಧನಕ್ಕೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಬಸ್ ಮಾಲಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ, ಸಮಾಜ ಸೇವಕರು ಮತ್ತು ದಾನಿಗಳಾಗಿ ಗುರುತಿಸಿಕೊಂಡಿದ್ದ ಪ್ರಕಾಶ್ ಶೇಖ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಇವರ ಅಗಲಿಕೆ ಬಸ್ ಮಾಲಕರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮತ್ತು ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ