ಕರಸೇವೆ: ಅಮೃತಸರದ ಗೋಲ್ಡನ್‌ ಟೆಂಪಲ್‌ ನಲ್ಲಿ ಪಾತ್ರೆ ತೊಳೆದ ರಾಹುಲ್ ಗಾಂಧಿ - Mahanayaka

ಕರಸೇವೆ: ಅಮೃತಸರದ ಗೋಲ್ಡನ್‌ ಟೆಂಪಲ್‌ ನಲ್ಲಿ ಪಾತ್ರೆ ತೊಳೆದ ರಾಹುಲ್ ಗಾಂಧಿ

03/10/2023

ಪಂಜಾಬ್‌ ನ ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕರಸೇವೆಯಲ್ಲಿ ಪಾಲ್ಗೊಂಡು ಭಕ್ತರು ಬಳಸುವ ನೀರಿನ ಬಟ್ಟಲುಗಳನ್ನು ಸ್ವಚ್ಛಗೊಳಿಸಿದರು.


Provided by

ಪಂಜಾಬ್‌ನ ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ ರಾಹುಲ್‌ ಗಾಂಧಿ ಮೊದಲು ಪ್ರಾರ್ಥನೆ ಸಲ್ಲಿಸಿದರು. ಇದಾದ ನಂತರ ಕರಸೇವೆಯಲ್ಲಿ ಪಾಲ್ಗೊಂಡು ಸ್ವಯಂಪ್ರೇರಿತವಾಗಿ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಗುರುದ್ವಾರ ಸ್ವಯಂಸೇವಕರೊಂದಿಗೆ ಸೇರಿ ಪಾತ್ರೆಗಳನ್ನು ತೊಳೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವೀಡಿಯೊದಲ್ಲಿ ಸಿಖ್ಖರ ಅತ್ಯುನ್ನತ ಸ್ಥಾನವಾದ ಅಕಲ್ ತಖ್ತ್‌ಗೆ ಭೇಟಿ ನೀಡಿ, ಅಲ್ಲಿ ಭಕ್ತರು ಬಳಸುವ ನೀರಿನ ಬಟ್ಟಲುಗಳನ್ನು ಸ್ವಚ್ಛಗೊಳಿಸುವ ಮೂಲಕ ಕರ ಸೇವೆ ಮಾಡಿದರು. ಇತರ ಭಕ್ತರ ನಡುವೆ ಕುಳಿತು ರಾಹುಲ್‌ ಗಾಂಧಿ ಪಾತ್ರೆಗಳನ್ನು ತೊಳೆದರು.
ರಾಹುಲ್ ಗಾಂಧಿ ಮಂಗಳವಾರ ಬೆಳಗ್ಗೆ ನಡೆಯುವ ಪಾಲ್ಕಿ ಸೇವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ.


Provided by

ಇತ್ತೀಚಿನ ಸುದ್ದಿ