ಅರ್ಜುನ ಪ್ರತಿಷ್ಟಾಪಿತ ದೇವಾಲಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಮೋದಿ ಹೆಸರಲ್ಲಿ ಅರ್ಚನೆ
03/10/2023
ಚಾಮರಾಜನಗರ: ಪೌರಾಣಿಕ ಹಿನ್ನೆಲೆಯ, ಮಧ್ಯಮ ಪಾಂಡವ ಅರ್ಜುನ ಪ್ರತಿಷ್ಠಾಪಿತ ಪ್ರತೀತಿಯ ನಗರದ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
ಸೋಮವಾರ ರಾತ್ರಿ ಕೆ.ಗುಡಿ ಜೆಎಲ್ಆರ್ ನಲ್ಲು ವಾಸ್ತವ್ಯ ಹೂಡಿದ್ದ ಅವರು ಇಂದು ಬೆಳಗ್ಗೆ ಹರಳುಕೋಟೆ ಆಂಜನೇಯ ಮತ್ತು ಜನಾರ್ಧನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಹಾಗೂ ತಮ್ಮ ಕುಟುಂಬದ ಹೆಸರಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲೂ ಅರ್ಚನೆ ಮಾಡಿಸಿದರು.