ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆಯ ಹೆಚ್ಚಳ - Mahanayaka
10:36 AM Thursday 12 - December 2024

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆಯ ಹೆಚ್ಚಳ

09/02/2021

ನವದೆಹಲಿ:  ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು,  ಪ್ರತಿ ಲೀಟರ್ ಗೆ 35 ಪೈಸೆಯಷ್ಟೆ ಮಂಗಳವಾರ  ಹೆಚ್ಚಳವಾಗಿದೆ.

ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ.87.30 ಆಗಿದ್ದು, ಮುಂಬೈಯಲ್ಲಿ ರೂ.93.83 ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ ದೆಹಲಿಯಲ್ಲಿ ರೂ.77.48 ಆಗಿದ್ದು, ಮುಂಬೈಯಲ್ಲಿ ರೂ.84.36 ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.89.83 ಹಾಗೂ ಡೀಸೆಲ್ ಬೆಲೆ ರೂ.82.79 ಆಗಿದೆ.

ಬ್ರೆಂಟ್ ಕಚ್ಚಾ ತೈಲ ಬೆಲೆ ಸೋಮವಾರ ಪ್ರತಿ ಬ್ಯಾರಲ್‌ಗೆ 60 ಡಾಲರ್ ತಲುಪಿದೆ. ಈ ವರ್ಷದಲ್ಲಿ ಇದು ಗರಿಷ್ಠ ಎಂದು ಹೇಳಲಾಗಿದೆ.  ಕಚ್ಚಾ ತೈಲಗಳ ಬೆಲೆ ಎರಿಕೆ  ಪೆಟ್ರೋಲ್ ಡೀಸೆಲ್ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ