ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ದೈಹಿಕ ಸಂಬಂಧ | ಈ ಘಟನೆ ನಡೆದದ್ದು ಜೈಲಿನಲ್ಲಿ! - Mahanayaka
9:17 AM Thursday 12 - December 2024

ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ದೈಹಿಕ ಸಂಬಂಧ | ಈ ಘಟನೆ ನಡೆದದ್ದು ಜೈಲಿನಲ್ಲಿ!

09/02/2021

ಒಡಿಶಾ: ಮಹಿಳೆಯನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ ವ್ಯಕ್ತಿಯೋರ್ವ ಬಳಿಕ ಮದುವೆಯಾಗಲು ಹಿಂದೇಟು ಹಾಕಿರುವ ಘಟನೆ  ಒಡಿಶಾದಲ್ಲಿ ನಡೆದಿದೆ. ಆದರೆ ಈ ಘಟನೆ ನಡೆದದ್ದು ಎಲ್ಲಿ ಗೊತ್ತೇ? ಒಡಿಶಾದ ತಿತಿಲಾಘಡ ಜೈಲಿನಲ್ಲಿ!

ಜೈಲಿನಲ್ಲಿ ಇಂತಹದ್ದೆಲ್ಲ ಘಟನೆ ನಡೆಯಲು ಸಾಧ್ಯವೇ? ಎನ್ನುವ ಅನುಮಾನಗಳು ಸಹಜ. ಆದರೆ ಭ್ರಷ್ಟ ಅಧಿಕಾರಿಗಳು ಇರುವಾಗ ಇಂತಹದ್ದೆಲ್ಲ ಘಟನೆ ಖಂಡಿತವಾಗಿಯೂ ನಡೆದೇ ನಡೆಯುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ತಿತಿಲಾಘಡ್ ಜೈಲಿನಲ್ಲಿ ಮಹಿಳೆಯೊಬ್ಬಳು ಬಂಧಿಯಾಗಿದ್ದಳು. ಈ ನಡುವೆ ಜೈಲಿನೊಳಗೆ  ಇದ್ದ ತೀರ್ಥಂಕರ್ ಪಟೇಲ್ ಎಂಬಾತ ಮಹಿಳೆಗೆ ಪರಿಚಯವಾಗಿದ್ದಾನೆ.

ಮಹಿಳೆಯ ನೋವುಗಳಿಗೆ ಸಾಂತ್ವಾನ ಹೇಳಿ ಸಜ್ಜನನಂತೆ ನಟಿಸಿದ ತೀರ್ಥಂಕರ ಮಹಿಳೆಯ ದೇಹದ ಮೇಲೆ ಆಸೆ ಹೊತ್ತಿದ್ದ ಎನ್ನುವ ವಿಚಾರ ಮಹಿಳೆಗೂ ತಿಳಿಯಲಿಲ್ಲ. ತನಗೆ ಸಾಂತ್ವನ ಹೇಳುತ್ತಿರುವ ಈತ ಎಷ್ಟು ಒಳ್ಳೆಯ ವ್ಯಕ್ತಿ ಎಂದು ಮಹಿಳೆ ಕೂಡ ಆತನ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆದಿದೆ. ಹೀಗೆ ದಿನ ಕಳೆದಂತೆ ಇವರಿಬ್ಬರು ಕೂಡ ಬಹಳ ಹತ್ತಿರವಾಗಿದ್ದರು.

ತೀರ್ಥಂಕರನನ್ನು ಸಂಪೂರ್ಣವಾಗಿ ನಂಬಿದ್ದ ಮಹಿಳೆ ತನ್ನ ಸರ್ವಸ್ವವನ್ನೂ ಆತನಿಗೆ ನೀಡಲು ಒಪ್ಪಿದ್ದಾಳೆ. ಆದರೆ, ಜೈಲಿನೊಳಗೆ ಹೇಗೆ ಇದೆಲ್ಲ ಎಂಬ ಪ್ರಶ್ನೆಗ ಬಂದಾಗ. ಲಂಚಕ್ಕಾಗಿ ಬೀದಿ ನಾಯಿಯಂತೆ ಕಾಯುತ್ತಿದ್ದ ಜೈಲಾಧಿಕಾರಿ ಈತನಿಗೆ ಸಿಕ್ಕಿದ್ದು, ಆತನ ಕೈಗೆ ಲಂಚ ಸಿಕ್ಕ ತಕ್ಷಣವೇ ಇವರಿಬ್ಬರಿಗೆ ಬೇಕಾದ ಸೌಲಭ್ಯವನ್ನು ಆತ ಒದಗಿಸಿದ್ದಾನೆ.

ಹೀಗೆ ಅಧಿಕಾರಿಗೆ ಹಣ ನೀಡಿ ಜೈಲಿನಲ್ಲಿ ಬಹಳಷ್ಟು ಬಾರಿ ಮಹಿಳೆಯ ಜೊತೆಗೆ ತೀರ್ಥಂಕರ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ನಡುವೆ ಮಹಿಳೆಗೆ ಜಾಮೀನು ದೊರಕಿದೆ.  ಜೈಲಿನಿಂದ ಹೊರ ಬಂದ ಮಹಿಳೆ. ನೂರಾರು ಕನಸುಗಳನ್ನು ಕಟ್ಟಿಕೊಂಡು ತೀರ್ಥಂಕರನನ್ನು ಭೇಟಿಯಾಗಲು ಹೋಗಿದ್ದಾಳೆ. ಈ ವೇಳೆ ಆತ, “ನೀನು ಯಾರು? ಎಂದು ಕೇಳಿ ಪರಿಚಯವಿಲ್ಲದವರಂತೆಯೇ ವರ್ತಿಸಿದ್ದಾನೆ. ಇದರಿಂದ ನೊಂದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಜೊತೆಗೆ ಮಾಧ್ಯಮಕ್ಕೂ ವಿಚಾರ ತಿಳಿಸಿದ್ದಾಳೆ.

ಇದೀಗ ಆರೋಪಿ ತೀರ್ಥಂಕರನ ಜೊತೆಯಲ್ಲಿ ಜೈಲಿನಲ್ಲಿ ಲಂಚ ನೀಡಿದರೆ ಮಂಚ ಸಿದ್ಧಗೊಳಿಸುತ್ತಿದ್ದ ಜೈಲಾಧಿಕಾರಿಗೂ ಬಿಸಿ ಮುಟ್ಟಿದ್ದು, ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಈ ಪರೀಕ್ಷೆಯ ವರದಿ ಬಂದ ತಕ್ಷಣವೇ ಆರೋಪಿಗಳ ಕೃತ್ಯ ಬುಡಮೇಲಾಗಲಿದೆ.

ಇತ್ತೀಚಿನ ಸುದ್ದಿ