ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ | ಕಾರಿನೊಳಗಿದ್ದ ವ್ಯಕ್ತಿ ಮಾಡಿದ್ದೇನು?
09/02/2021
ಮುಲ್ಕಿ: ಇಲ್ಲಿನ ಕೊಲ್ನಾಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾರ್ನಾಡು ನಿವಾಸಿ ಫಯಾಝ್ ಎಂಬವರು ಪಣಂಬೂರಿನಿಂದ ಮುಲ್ಕಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಲ್ನಾಡು ಬಳಿ ಕಾರಿನ ಬಾನೆಟ್ ಒಳಗೆ ಬೆಂಕಿ ಬರುತ್ತಿರುವುದನ್ನು ಗಮನಿಸಿದ್ದಾರೆ.
ತಕ್ಷಣವೇ ಕಾರನ್ನು ನಿಲ್ಲಿಸಿ ಹೊರಕ್ಕೆ ಬಂದಿದ್ದಾರೆ. ಈ ವೇಳೆ ನೋಡನೋಡುತ್ತಿದ್ದಂತೆಯೇ ಕಾರು ಸುಟ್ಟು ಭಸ್ಮವಾಗಿದೆ. ಕಾರು ಉರಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಭಯಭೀತರಾಗಿದ್ದರು.
ಕಾರಿನ ಪೆಟ್ರೋಲ್ ಟ್ಯಾಂಕ್ ಬ್ಲಾಸ್ಟ್ ಆಗುವ ಭೀತಿ ಇದ್ದುದನ್ನು ಮನಗಂಡ ಸಂಚಾರಿ ಪೊಲೀಸರು ಮತ್ತು ಮುಲ್ಕಿ ಪೊಲೀಸರು ಒಂದೇ ಹೆದ್ದಾರಿಯಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.