ಜಗದೀಶ್ ಅಧಿಕಾರಿಯನ್ನು ಇನ್ನೂ ಯಾಕೆ ಬಿಜೆಪಿ ಉಚ್ಛಾಟನೆ ಮಾಡಿಲ್ಲ | ಜೆಡಿಎಸ್ ಅಧ್ಯಕ್ಷ ಅಕ್ಷಿತ್  ಸುವರ್ಣ ಪ್ರಶ್ನೆ - Mahanayaka
11:19 PM Wednesday 11 - December 2024

ಜಗದೀಶ್ ಅಧಿಕಾರಿಯನ್ನು ಇನ್ನೂ ಯಾಕೆ ಬಿಜೆಪಿ ಉಚ್ಛಾಟನೆ ಮಾಡಿಲ್ಲ | ಜೆಡಿಎಸ್ ಅಧ್ಯಕ್ಷ ಅಕ್ಷಿತ್  ಸುವರ್ಣ ಪ್ರಶ್ನೆ

09/02/2021

ಮಂಗಳೂರು: ಬಿಲ್ಲವರ ಮೂಲಪುರುಷ ಕೋಟಿ ಚೆನ್ನಯರ ಅವಹೇಳನ ಮಾಡಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯನ್ನು ಯಾಕೆ ಇನ್ನೂ ಕೂಡ ಬಿಜೆಪಿ ಉಚ್ಛಾಟನೆ ಮಾಡಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಕ್ಷಿತ್  ಸುವರ್ಣ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಲ್ಲವರ ಪಾತ್ರ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.  ಕೋಟಿ ಚೆನ್ನಯರ ಹೆಸರು ಹೇಳಿಕೊಂಡು ಮತ ಪಡೆದ ಬಿಜೆಪಿ. ಇದೀಗ ಅದೇ ಬಿಜೆಪಿಯ ಮುಖಂಡನೋರ್ವ ಕೋಟಿ ಚೆನ್ನಯರ ಅವಹೇಳನ ಮಾಡಿದ ಸಂದರ್ಭದಲ್ಲಿ ಜಾಣ ಮೌನ ವಹಿಸಿದೆ ಎಂದು ಅವರು ಟೀಕಸಿದರು.

ಜಗದೀಶ್ ಅಧಿಕಾರಿ ಅವರ  ಹೇಳಿಕೆಯ ಬಗ್ಗೆ ಬಿಲ್ಲವ ಸಮಾಜದ ಶಾಸಕರು,  ಮಂತ್ರಿಗಳು ಒಂದೇ ಒಂದು ಹೇಳಿಕೆಗಳನ್ನು ಕೂಡ ನೀಡಿಲ್ಲ. ಇಂತಹ ಪಕ್ಷಕ್ಕೆ ಮತ ನೀಡುವ ಮೊದಲು ಬಿಲ್ಲವರು, ಆ ಪಕ್ಷದ ಬಗ್ಗೆ ಅರಿಯಬೇಕು ಎಂದು ಅಕ್ಷಿತ್ ಸುವರ್ಣ ಮನವಿ ಮಾಡಿದರು.

ಬಿಲ್ಲವ ಸಮುದಾಯಕ್ಕೆ ಅವಮಾನವಾದಾಗ ಹಿಂದೂ ಸಂಘಟನೆಗಳು ಕೂಡ ಮೌನವಹಿಸಿವೆ. ಇನ್ನಾದರೂ ಸಂಘಟನೆಗಳು ಜಗದೀಶ್ ಅಧಿಕಾರಿಯ ಅಹಂಕಾರದ ಹೇಳಿಕೆಗೆ ತಕ್ಕ ಉತ್ತರವನ್ನು ನೀಡಲಿ ಎಂದು ಅವರು ಆಗ್ರಹಿಸಿದರು.

ಇತ್ತೀಚಿನ ಸುದ್ದಿ