ನಿಜವಾದ ಭಾರತೀಯರು ನಕಲಿ ರೈತರ ಹೋರಾಟವನ್ನು ಬೆಂಬಲಿಸಬಾರದು | ಸಚಿವ ಈಶ್ವರಪ್ಪ - Mahanayaka
2:22 AM Wednesday 11 - December 2024

ನಿಜವಾದ ಭಾರತೀಯರು ನಕಲಿ ರೈತರ ಹೋರಾಟವನ್ನು ಬೆಂಬಲಿಸಬಾರದು | ಸಚಿವ ಈಶ್ವರಪ್ಪ

09/02/2021

ಶಿವಮೊಗ್ಗ: ನಿಜವಾದ ಭಾರತೀಯರು ನಕಲಿ ರೈತರ ಹೋರಾಟವನ್ನು ಬೆಂಬಲಿಸಬಾರದು. ಕೃಷಿ ಕಾಯ್ದೆಯು ರೈತರ ಒಳಿತಿಗಾಗಿ ಇದೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕೃಷಿ ಕಾಯ್ದೆಯ ಬಗ್ಗೆ ಪ್ರಧಾನಿ ಮೋದಿ ಅವರು ನಿನ್ನೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇರುವುದು ಬಹಿರಂಗವಾಗುತ್ತಿದೆ ಎಂದು ಅವರು ಹೇಳಿದರು.

ರೈತರ ಪ್ರತಿಭಟನೆಯನ್ನು ವಿದೇಶಿಯರು ಹೈಜಾಕ್ ಮಾಡಿರುವುದು ಬಹಿರಂಗವಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಈ ಕೃಷಿ ಕಾಯ್ದೆಯ ಬಗ್ಗೆ ಸ್ವತಃ ಪ್ರಸ್ತಾಪ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಹೇಳಿದರು.

ವಿದೇಶಿಯರ ಸಂಚನ್ನು ರಾಷ್ಟ್ರಭಕ್ತರು ವಿಫಲಗೊಳಿಸಬೇಕು ಎಂದು ಕರೆ ನೀಡಿದ ಅವರು,  ಬಿಲ್ ಪಾಸ್ ಮಾಡುವವರೆಗೆ ಸುಮ್ಮನಿದ್ದ ವಿಪಕ್ಷಗಳು ಇದೀಗ ವಿದ್ವಂಸಕ ಕೃತ್ಯ ನಡೆಸುತ್ತಿರುವ ದೇಶದ್ರೋಹಿಗಳ ಪರವಹಿಸಿ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಇತ್ತೀಚಿನ ಸುದ್ದಿ