ನಿಮ್ಮ ಮೊಬೈಲ್ ಗೂ ಬಂದಿದೆಯೇ ಈ ಸಂದೇಶ: ಏನಿದು ಸಂದೇಶ? - Mahanayaka
7:17 AM Sunday 22 - September 2024

ನಿಮ್ಮ ಮೊಬೈಲ್ ಗೂ ಬಂದಿದೆಯೇ ಈ ಸಂದೇಶ: ಏನಿದು ಸಂದೇಶ?

emergency alert
12/10/2023

ನವದೆಹಲಿ:  ಭಾರತದಾದ್ಯಂತ ಅನೇಕ ಮೊಬೈಲ್ ಬಳಕೆದಾರರ ಮೊಬೈಲ್ ಗಳಿಗೆ ಭಾರತ ಸರ್ಕಾರ ತುರ್ತು ಧ್ವನಿಯೊಂದಿಗೆ ಸಂದೇಶವೊಂದನ್ನು ಕಳುಹಿಸಿದೆ. ಈ ಸಂದೇಶದ ಏನು ಎನ್ನುವುದು ತಿಳಿಯದೇ ಸಾರ್ವಜನಿಕರು ಕ್ಷಣ ಕಾಲ ದಂಗಾದ ಘಟನೆ ಕೂಡ ನಡೆಯಿತು.

ಈ ಸಂದೇಶ ಬರುವುದಕ್ಕೂ ಮೊದಲು ಹಲವರ ಮೊಬೈಲ್ ಗಳಿಗೆ ಈ ರೀತಿಯ ಸಂದೇಶವನ್ನ ಕಳುಹಿಸುವುದಾಗಿ  ಮೊದಲೇ ಮೆಸೇಜ್ ಗಳನ್ನು ಕಳುಹಿಸಲಾಗಿತ್ತು.  ಅದರಲ್ಲಿ “ ಪ್ರಮುಖ ಸೂಚನೆ”: ತುರ್ತು ಪರಿಸ್ಥಿತಿಯ ಕುರಿತು ನಿಮ್ಮ ಮೊಬೈಲ್ ನಲ್ಲಿ ಪರೀಕ್ಷಾ ಸಂದೇಶವನ್ನು ನೀವು ಸ್ವೀಕರಿಸಬಹುದು. ದಯವಿಟ್ಟು ಗಾಬರಿಯಾಗಬೇಡಿ, ಈ ಸಂದೇಶವು ನಿಜವಾದ ತುರ್ತುಪರಿಸ್ಥಿತಿಯನ್ನ ಸೂಚಿಸುವುದಿಲ್ಲ. ಈ ಸಂದೇಶವನ್ನು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಯೋಜಿತ ಪ್ರಯೋಗ ಪ್ರಕ್ರಿಯೆಯಾಗಿ ಕಳುಹಿಸಲಾಗಿದೆ. ಎಂದು ತಿಳಿಸಲಾಗಿತ್ತು.

ಆ ಬಳಿಕ ಬಂದ ಸಂದೇಶದಲ್ಲಿ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್—ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಜೊತೆಗೆ ಸಮಯ ದಿನಾಂಕವನ್ನೂ ನಮೂದಿಸಲಾಗಿದೆ.


Provided by

ಇತ್ತೀಚಿನ ಸುದ್ದಿ