ಕೊವಿಡ್ ಆರ್ಥಿಕ ಸಂಕಷ್ಟ | ಪರಿಸ್ಥಿತಿ ಸರಿದೂಗಿಸಲು ವಿಲೀನಕ್ಕೆ ಮುಂದಾದ KSRTC - Mahanayaka

ಕೊವಿಡ್ ಆರ್ಥಿಕ ಸಂಕಷ್ಟ | ಪರಿಸ್ಥಿತಿ ಸರಿದೂಗಿಸಲು ವಿಲೀನಕ್ಕೆ ಮುಂದಾದ KSRTC

23/10/2020

ಬೆಂಗಳೂರು: ಕೊವಿಡ್ 19 ಕಾರಣ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕೆಎಸ್ಸಾರ್ಟಿಸಿ ಇದೀಗ ವೆಚ್ಚ ತಗ್ಗಿಸುವ ಉದ್ದೇಶದಿಂದ ಎರಡು ನಿಗಮಗಳನ್ನು ವಿಲೀನಗೊಳಿಸಲು ಮುಂದಾಗಿದೆ.  ಆರೇಳು ತಿಂಗಳಿನಿಂದ ಕಡಿಮೆಯಾದ ಆದಾಯವೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.

ಮೈಸೂರು ಗ್ರಾಮಾಂತರ ಹಾಗೂ ಮೈಸೂರು ನಗರ ವಿಭಾಗಗಳನ್ನು ವಿಲೀನಗೊಳಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ವೆಚ್ಚ ತಗ್ಗಿಸಿ ಆರ್ಥಿಕ ಪರಿಸ್ಥಿತಿ ಸದೃಢಗೊಳಿಸುವ ಉದ್ದೇಶದಿಂದ ಈ ಎರಡೂ ವಿಭಾಗಗಳನ್ನು ವಿಲೀನಗೊಳಿಸಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.

ಎರಡೂ ವಿಭಾಗಗಳನ್ನು ವಿಲೀನಗೊಳಿಸುವ ಸೂಕ್ತತೆ, ಸಾಧಕ-ಬಾಧಕಗಳ ಪರಿಶೀಲಿಸಲು ಹಾಗೂ ಮೈಸೂರು ನಗರ ಸಾರಿಗೆ ವಿಭಾಗವನ್ನು ಆರ್ಥಿಕವಾಗಿ ಸದೃಢಗೊಳಿಸುವ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ಆರು ಮಂದಿ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಈ ವಿಲೀನ ಪ್ರಕ್ರಿಯೆಯಿಂದ ಕೆಎಸ್ಸಾರ್ಟಿಸಿ ನೌಕರರಿಗೆ ತೊಂದರೆಯಾಗಬಹುದೇ? ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಸಿಬ್ಬಂದಿಯ ಕಡಿತ ಸಾಧ್ಯತೆಗಳಿವೆಯೇ ಎಂಬ ಬಗ್ಗೆ ಸದ್ಯ ಆತಂಕ ಮನೆ ಮಾಡಿದೆ.

ಇತ್ತೀಚಿನ ಸುದ್ದಿ