ದಲಿತರನ್ನು ವ್ಯಂಗ್ಯವಾಡುತ್ತಿದ್ದವರು ಮೀಸಲಾತಿಗಾಗಿ ಕ್ಯೂ ನಿಂತಿದ್ದಾರೆ! | ಓದುಗರ ಲೇಖನ - Mahanayaka

ದಲಿತರನ್ನು ವ್ಯಂಗ್ಯವಾಡುತ್ತಿದ್ದವರು ಮೀಸಲಾತಿಗಾಗಿ ಕ್ಯೂ ನಿಂತಿದ್ದಾರೆ! | ಓದುಗರ ಲೇಖನ

09/02/2021

ದಲಿತ ಸಂಘಟನೆಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ವೇಳೆ ನಗುತ್ತಿದ್ದ, ವ್ಯಂಗ್ಯವಾಡುತ್ತಿದ್ದ ಸಮುದಾಯಗಳು ಇಂದು ಒಂದೊಂದಾಗಿ ಮೀಸಲಾತಿಗಾಗಿ ಸರ್ಕಾರದ ಎದುರು ಕೈ ಒಡ್ಡಿ ನಿಂತಿದ್ದು, ಮೀಸಲಾತಿ ಅಂದ್ರೆ ಭಿಕ್ಷೆ ಎಂದೆಲ್ಲ ಅವಮಾನಿಸುತ್ತಿದ್ದ ಸಮುದಾಯಗಳಿಗೆ ಇಂದು ಮೀಸಲಾತಿಯ ಅರಿವು ಮೂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ದಲಿತರಿಗೆ ಮೀಸಲಾತಿ ನೀಡುತ್ತಾರೆ. ಅವರು ದುಡಿಯುದೇ ಜೀವನ ನಡೆಸುತ್ತಾರೆ ಎಂಬೆಲ್ಲ ಮಾತುಗಳನ್ನಾಡುತ್ತಿದ್ದ.  ಸಮುದಾಯಗಳು ಇಂದು ತಮ್ಮನ್ನು ಎಸ್ಟಿಗೆ ಸೇರಿಸಿ, ನಮ್ಮನ್ನು ಎಸ್ಸಿಗೆ ಸೇರಿಸಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ಹಿಂದೆ ದಲಿತ ಸಂಘಟನೆಗಳು ಎಲ್ಲ ಸಮುದಾಯಗಳಿಗೋಸ್ಕರ ಹೋರಾಟ ನಡೆಸುತ್ತಿದ್ದರೂ, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀಯಾಳಿಸಿ, ಅವಮಾನಿಸುತ್ತಿದ್ದವರಿಗೆ ಇಂದು ಮೀಸಲಾತಿಯ ಅಗತ್ಯ ಏನು ಎಂದು ಅರಿವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಯಾವುದೇ ಸಮುದಾಯಗಳು ಮೀಸಲಾತಿ ಬಯಸುವುದು ತಪ್ಪಲ್ಲ. ಆದರೆ ಇನ್ನೊಂದು ಸಮುದಾಯವನ್ನು ನೋಡಿ ನಗುವುದು ತುಂಬಾ ತಪ್ಪು. ಗೌತಮ ಬುದ್ಧರು ಹೇಳಿದಂತೆ, ಯಾರನ್ನೂ ನಾವು ತೀರ್ಪಿಗೆ ಒಳಪಡಿಸಬಾರದು. ಇನ್ನೊಬ್ಬರನ್ನು ನಾವು ತೀರ್ಪಿಗೆ ಒಳಪಡಿಸಿದರೆ, ಒಂದು ದಿನ ತೀರ್ಪು ಪಡೆಯುವ ಸ್ಥಳದಲ್ಲಿ ನಾವಿರುತ್ತೇವೆ ಎಂಬ ಮಾತು ಅಕ್ಷಶಃ ನಿಜವಾಗಿದೆ. ಯಾರಿಗೆ ಮೀಸಲಾತಿ ಅಗತ್ಯವಿದೆಯೋ ಅಂತಹವರಿಗೆ ಮೀಸಲಾತಿ ಸಿಗಲಿ. ಒಬ್ಬನೇ ಒಬ್ಬ ದಲಿತ ಯಾರನ್ನೂ ನೋಡಿ ನಗುವುದಿಲ್ಲ.

ಪ್ರವೀಣ್ ಕುಮಾರ್, ಮಂಗಳೂರು

ಇತ್ತೀಚಿನ ಸುದ್ದಿ