ಇಸ್ರೇಲ್ ನ 'ಸಾಮೂಹಿಕ ಶಿಕ್ಷೆ ನೀತಿಗಳನ್ನು' ಖಂಡಿಸಿದ ಜೋರ್ಡಾನ್, ಈಜಿಪ್ಟ್ ದೇಶದ ನಾಯಕರು - Mahanayaka
7:02 AM Sunday 22 - September 2024

ಇಸ್ರೇಲ್ ನ ‘ಸಾಮೂಹಿಕ ಶಿಕ್ಷೆ ನೀತಿಗಳನ್ನು’ ಖಂಡಿಸಿದ ಜೋರ್ಡಾನ್, ಈಜಿಪ್ಟ್ ದೇಶದ ನಾಯಕರು

20/10/2023

ಗಾಝಾದಲ್ಲಿರುವ ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನ ‘ಸಾಮೂಹಿಕ ಶಿಕ್ಷೆ’ ನೀತಿ ಮತ್ತು ‘ಫೆಲೆಸ್ತೀನೀಯರನ್ನು ತಮ್ಮ ಭೂಮಿಯಿಂದ ಈಜಿಪ್ಟ್ ಅಥವಾ ಜೋರ್ಡಾನ್ ಗೆ ಸ್ಥಳಾಂತರಿಸುವ’ ಪ್ರಯತ್ನಗಳನ್ನು ಈಜಿಪ್ಟ್ ಮತ್ತು ಜೋರ್ಡಾನ್ ನಾಯಕರು ಖಂಡಿಸಿದ್ದಾರೆ. ದೊರೆ ಅಬ್ದುಲ್ಲಾ ಮತ್ತು ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಗುರುವಾರ ಕೈರೋದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಗಾಝಾದಲ್ಲಿ ಮಿಲಿಟರಿ ಉಲ್ಬಣಗೊಳ್ಳುವ ಬಗ್ಗೆ ಚರ್ಚಿಸಿದರು. ಇವರಿಬ್ಬರೂ ತಮ್ಮ ನಿಕಟ ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ತಮ್ಮ ಮಾತುಕತೆಯ ಸಮಯದಲ್ಲಿ ಈಜಿಪ್ಟ್ ಮತ್ತು ಜೋರ್ಡಾನ್ ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನಿಕಟ ಸಹಕಾರವನ್ನು ಬೆಳೆಸುವ ಮಾರ್ಗಗಳನ್ನು ಅವರು ಚರ್ಚೆ ನಡೆಸಿದರು. ಎರಡೂ ದೇಶಗಳ ಉನ್ನತ ರಾಜಕೀಯ ಮಟ್ಟದಲ್ಲಿ ಸಮಾಲೋಚನೆ ಮತ್ತು ಸಮನ್ವಯವನ್ನು ಮುಂದುವರಿಸುವ ಬದ್ಧತೆಯನ್ನು ಅವರು ಇದೇ ವೇಳೆ ಒತ್ತಿ ಹೇಳಿದರು.

ಗಾಝಾ ಪಟ್ಟಿಯಲ್ಲಿನ ಪ್ರಸ್ತುತ ಮಿಲಿಟರಿ ಕಾರ್ಯಾಚರಣೆ ಮತ್ತು ಗಾಝಾದಲ್ಲಿನ ಫೆಲೆಸ್ತೀನ್ ಜನರ ಭದ್ರತಾ ಪರಿಸ್ಥಿತಿ ಮತ್ತು ಮಾನವೀಯ ಪರಿಸ್ಥಿತಿಗಳ ಹದಗೆಡುವಿಕೆ ಮತ್ತು ಸಾವಿರಾರು ಜನರ ಸಾವುಗಳು ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅಧ್ಯಕ್ಷೀಯ ವಕ್ತಾರ ಅಹ್ಮದ್ ಫಹ್ಮಿ ಹೇಳಿದ್ದಾರೆ.


Provided by

ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಎಲ್ಲಾ ಕೃತ್ಯಗಳನ್ನು ಜೋರ್ಡಾನ್, ಈಜಿಪ್ಟ್ ದೇಶದ ನಾಯಕರು ಮತ್ತೊಮ್ಮೆ ಬಲವಾಗಿ ಖಂಡಿಸಿದ್ದಾರೆ.

ಇತ್ತೀಚಿನ ಸುದ್ದಿ