ಫೆಲೆಸ್ತೀನಿಯರನ್ನು ಕೊಲ್ಲುವುದರಿಂದ ಇಸ್ರೇಲ್ ಹೆಚ್ಚು ಸುರಕ್ಷಿತವಾಗುವುದಿಲ್ಲ: ಫೆಲೆಸ್ತೀನ್ ರಾಯಭಾರಿ ಎಚ್ಚರಿಕೆ - Mahanayaka
8:56 AM Sunday 22 - September 2024

ಫೆಲೆಸ್ತೀನಿಯರನ್ನು ಕೊಲ್ಲುವುದರಿಂದ ಇಸ್ರೇಲ್ ಹೆಚ್ಚು ಸುರಕ್ಷಿತವಾಗುವುದಿಲ್ಲ: ಫೆಲೆಸ್ತೀನ್ ರಾಯಭಾರಿ ಎಚ್ಚರಿಕೆ

20/10/2023

ಫೆಲೆಸ್ತೀನಿಯರ ಬಲವಂತದ ವರ್ಗಾವಣೆ ಮತ್ತು ವಿನಾಶವನ್ನು ಬಯಸುವ ಇಸ್ರೇಲ್ ಪರವಾಗಿ ಕೆಲವರು ಮಾತನಾಡುತ್ತಾರೆ ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಷ್ಟ್ರದ ರಾಯಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಚರ್ಚಿಸಲು ನ್ಯೂಯಾರ್ಕ್ ಸಿಟಿಯಲ್ಲಿ ಕರೆದ ಭದ್ರತಾ ಮಂಡಳಿ ಸಭೆಯಲ್ಲಿ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಮಾತನಾಡಿದರು. ಈ ಸಂಘರ್ಷದಲ್ಲಿ “ಮಾನವೀಯ ವಿರಾಮಗಳಿಗೆ” ಕರೆ ನೀಡುವ ಕರಡು ನಿರ್ಣಯವನ್ನು ಯುಎಸ್ ವೀಟೋ ಮಾಡಿದ ಮತದಾನದ ನಂತರ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿತು.

ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ ನೂರಾರು ರೋಗಿಗಳು ಮತ್ತು ನಾಗರಿಕರು ಸಾವನ್ನಪ್ಪಿದ ಒಂದು ದಿನದ ನಂತರ್ ಈ ಸಭೆ ನಡೆಯಿತು. ಫೆಲೆಸ್ತೀನ್ ಸಶಸ್ತ್ರ ಗುಂಪು ಇಸ್ಲಾಮಿಕ್ ಜಿಹಾದ್ ಈ ದಾಳಿಯನ್ನು ನಡೆಸಿದೆ ಎಂದು ಇಸ್ರೇಲ್ ಆರೋಪಿಸಿದೆ.


Provided by

“ಈ ಕೌನ್ಸಿಲ್ ಎರಡು ದಿನಗಳ ಹಿಂದೆ ಕದನ ವಿರಾಮಕ್ಕೆ ಕರೆ ನೀಡುತ್ತಾ ಇದ್ದಿದ್ರೆ ಅದು ನೂರಾರು ಜೀವಗಳನ್ನು ಉಳಿಸುತ್ತಿತ್ತು” ಎಂದು ಮನ್ಸೂರ್ ಕೌನ್ಸಿಲ್ ಸದಸ್ಯರಿಗೆ ಹೇಳಿದರು. ಸೋಮವಾರ ರಷ್ಯಾ ಪ್ರಸ್ತಾಪಿಸಿದ ಈ ಹಿಂದಿನ ಕರಡು ನಿರ್ಣಯವನ್ನು ಅವ್ರು ಇದೇ ವೇಳೆ ಉಲ್ಲೇಖಿಸಿದರು. ಇದು ಮಾನವೀಯ ಆಧಾರದ ಮೇಲೆ ಕದನ ವಿರಾಮಕ್ಕೆ ಕರೆ ನೀಡಿತ್ತು” ಎಂದರು.

“ರಕ್ತಪಾತವನ್ನು ನಿಲ್ಲಿಸಿ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಮನ್ಸೂರ್ ಕೌನ್ಸಿಲ್ಸ್ ಗೆ ಹೇಳಿದರು. ಫೆಲೆಸ್ತೀನಿಯರನ್ನು ಕೊಲ್ಲುವುದರಿಂದ್ದ ಇಸ್ರೇಲ್ ಎಂದಿಗೂ ಹೆಚ್ಚು ಸುರಕ್ಷಿತವಾಗಿರುವುದಿಲ್ಲ” ಎಂದು ಹೇಳಿದರು.

ಇತ್ತೀಚಿನ ಸುದ್ದಿ