ಇನ್ನು ಮುಂದೆ ವಾರಕ್ಕೆ ನಾಲ್ಕು ದಿನ ಕೆಲಸ, ಮೂರು ದಿನ ರಜೆ! - Mahanayaka
10:12 AM Thursday 12 - December 2024

ಇನ್ನು ಮುಂದೆ ವಾರಕ್ಕೆ ನಾಲ್ಕು ದಿನ ಕೆಲಸ, ಮೂರು ದಿನ ರಜೆ!

10/02/2021

ನವದೆಹಲಿ: ನೂತನ ಕಾರ್ಮಿಕ ಸಂಹಿತೆಯು ವಾರದ ಕೆಲಸದ ದಿನಗಳನ್ನು ಏಳರಿಂದ ನಾಲ್ಕಕ್ಕೆ ಇಳಿಸಲು ಕಂಪೆನಿಗಳಿಗೆ  ಅವಕಾಶ ನೀಡಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದ್ದು,  ಪಂಜಾಬ್, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಈ ವಾರ ತಮ್ಮ ಕರಡು ನಿಯಮಾವಳಿಗಳನ್ನು ಅಂತ್ಯಗೊಳಿಸಲಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

ವಾರಕ್ಕೆ 48 ಗಂಟೆಗಳ ಕೆಲಸದ ಮಿತಿ ಮುಂದುವರಿಯಲಿದೆ. ಕಂಪೆನಿಗಳು ನೌಕರರನ್ನು ದಿನಕ್ಕೆ 12ಗಂಟೆಗಳಂತೆ ನಾಲ್ಕು ದಿನ,  10 ಗಂಟೆಗಳಂತೆ 5ದಿನ ಮತ್ತು 8 ಗಂಟೆಗಳಂತೆ 6 ದಿನ ಕೆಲಸದಲ್ಲಿ ತೊಡಗಿಸುವ ಆಯ್ಕೆಯನ್ನು  ಹೊಂದಲಿವೆ. ವಾರದಲ್ಲಿ ಕೆಲಸದ ದಿನಗಳು ಐದಕ್ಕಿಂತ ಕಡಿಮೆಯಾಗಬಹುದು. ಕಂಪೆನಿಗಳು ನಾಲ್ಕು ದಿನಗಳ ಕೆಲಸವನ್ನು ಆಯ್ಕೆ ಮಾಡಿಕೊಂಡರೆ, ನೌಕರರಿಗೆ ವಾರಕ್ಕೆ ಮೂರು ದಿನ ವೇತನ ಸಹಿತ ರಜೆ ನೀಡಬೇಕಾಗುತ್ತದೆ.  ಐದುಗಳ ದಿನದ ಕೆಲಸಕ್ಕೆ  ಎರಡು ದಿನ ಮತ್ತು ಆರು ದಿನಗಳ ಕೆಲಸಕ್ಕೆ  ಒಂದು ದಿನದ ಕೆಲಸಕ್ಕೆ ಒಂದು ದಿನದ ರಜೆ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

ಇನ್ನೂ ಕೇಂದ್ರ ಸರ್ಕಾರವು ಈ ನಿಯಮಗಳನ್ನು ಪಾಲಿಸಲು ಕಂಪೆನಿಗಳ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಬದಲಾವಣೆಯು ಕೆಲಸದ ಅವಧಿಯಲ್ಲಿ  ಹೊಂದಾಣಿಕೆಗೆ ಅವಕಾಶ ನೀಡುತ್ತದೆ ಎಂದು ಅಪೂರ್ವಚಂದ್ರ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ