ಭಾರತದ ಸಾಂಪ್ರದಾಯಿಕ ಉಡುಗೆಯ ಒಳಗೆ 1.7 ಕೋ.ರೂ. ಮೌಲ್ಯದ ಡ್ರಗ್ಸ್ ಪತ್ತೆ!
10/02/2021
ನವದೆಹಲಿ: ಭಾರತದ ಸಾಂಪ್ರದಾಯಿಕ ಉಡುಗೆಗಳಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಗಳನ್ನು ಆಸ್ಟ್ರೇಲಿಯಾಕ್ಕೆ ಸಾಗಿಸುತ್ತಿದ್ದ ತಂಡವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.
ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋ.ರೂ. ಮೌಲ್ಯದ ಡ್ರಗ್ಸ್ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಗುಪ್ತಚರ ಇಲಾಖೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.
ಕಸ್ಟಮ್ಸ್ ಅಧಿಕಾರಿಗಳು ಸರಕುಗಳನ್ನು ದೆಹಲಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಪರಿಶೀಲನೆಯ ವೇಳೆ ಲೆಹೆಂಗಾಗಳ ಒಳಗೆ 3900 ಗ್ರಾಂನ ಎಂಡಿಎಂಎ ಡ್ರಗ್ ಇತ್ತು. ಎಂಡಿಎಂಎ ಡ್ರಗ್ ಗಳ ಅತಿಯಾದ ಸೇವನೆಯಿಂದ ಲಿವರ್, ಕಿಡ್ನಿ ಹಾಗೂ ಹೃದಯಕ್ಕೆ ಬಹಳ ಬೇಗನೆ ಹಾನಿ ಸಂಭವಿಸುತ್ತವೆ.