ನಾಲ್ಕು ಕಾಲಿನ ಕೋಳಿ ಮರಿಯ ಜನನ:  ಸಾರ್ವಜನಿಕರಿಗೆ ಅಚ್ಚರಿ - Mahanayaka
9:59 PM Thursday 12 - December 2024

ನಾಲ್ಕು ಕಾಲಿನ ಕೋಳಿ ಮರಿಯ ಜನನ:  ಸಾರ್ವಜನಿಕರಿಗೆ ಅಚ್ಚರಿ

four legged chick
30/10/2023

ಹಾರೋಹಳ್ಳಿ:  ನಾಲ್ಕು ಕಾಲಿನ ಕೋಳಿಮರಿಯೊಂದರ ಜನನ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುನಿರಾಜು ಎಂಬವರ ಮನೆಯಲ್ಲಿ ನಾಲ್ಕು ಕಾಲಿನ ಕೋಳಿ ಮರಿಯ ಜನನವಾಗಿದೆ.  ಈ ವಿಚಾರ ತಿಳಿದು ಸ್ಥಳೀಯರು ತಂಡೋಪತಂಡವಾಗಿ ಮುನಿರಾಜು ಅವರ ಮನೆಗೆ ಭೇಟಿ ನೀಡಿ ಕುತೂಹಲದಿಂದ ನೋಡುತ್ತಿದ್ದಾರೆ.

ಮುನಿರಾಜು ಅವರು ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಇತ್ತೀಚೆಗೆ ಕೋಳಿಯೊಂದು 15ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟು ಕಾವುಕೊಟ್ಟಿತ್ತು. ಅಕ್ಟೋಬರ್ 29ರಂದು ಮೊಟ್ಟೆ ಒಡೆದು ಮರಿಗಳು ಜನಿಸಿದ್ದವು. ಈ ಪೈಕಿ ಒಂದು ಕೋಳಿ ಮರಿಗೆ ನಾಲ್ಕು ಕಾಲುಗಳಿದ್ದು, ಕುತೂಹಲಕ್ಕೆ ಕಾರಣವಾಯಿತು.

ಸದ್ಯ ನಾಲ್ಕು ಕಾಲಿನ ಕೋಳಿ ಮರಿ ಆರೋಗ್ಯವಾಗಿದ್ದು, ಇಲ್ಲಿನ ಜನರಿಗೆ ಕುತೂಹಲಕಾರಿ ಹಾಗೂ ವಿಶೇಷ ಆಕರ್ಷಣೆಯ ವಸ್ತುವಾಗಿ ಪರಿಣಮಿಸಿದೆ.

ಇತ್ತೀಚಿನ ಸುದ್ದಿ