ಕಾಲೇಜು ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಅತ್ಯಾಚಾರ - Mahanayaka
1:42 PM Wednesday 11 - December 2024

ಕಾಲೇಜು ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆಟೋ ಚಾಲಕ ಸೇರಿದಂತೆ ಮೂವರಿಂದ ಅತ್ಯಾಚಾರ

11/02/2021

ಹೈದರಾಬಾದ್:  ಇಲ್ಲಿನ ಗಾಟ್ಕೇಸರ್ ನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬೀ ಫಾರ್ಮಸಿ ವಿದ್ಯಾರ್ಥಿನಿಯನ್ನು ಆಟೋ ಚಾಲಕ ಸೇರಿದಂತೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಈ ಘಟನೆ ಬುಧವಾರ ಸಂಜೆ ಸುಮಾರು 6:30ರ ವೇಳೆಗೆ ನಡೆದಿದೆ. ಯುವತಿ ಕಂದಲ್ಕೊಯಾದ ಬೀ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯಾ. ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನಗರಂನಲ್ಲಿ ಬಸ್​ ಇಳಿದಿದ್ದಾಳೆ. ಬಳಿಕ ರಾಮಪಲ್ಲಿ ಆರ್​ ಎಲ್​ ನಗರಕ್ಕೆ ತೆರಳಲು ಆಟೋವೊಂದನ್ನು ಹತ್ತಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ಜೊತೆ ಆಕೆಯ ಸೀನಿಯರ್ ವಿದ್ಯಾರ್ಥಿ ಹಾಗೂ ಇತರ ವಿದ್ಯಾರ್ಥಿಗಳು ಜೊತೆಗಿದ್ದರು. ಆದರೆ, ರಸ್ತೆ ಮಧ್ಯೆ ಇವರು ಇಳಿದುಕೊಳ್ಳುತ್ತಾರೆ.

ಆಟೋದಲ್ಲಿ ಯಾರೂ ಇಲ್ಲದೇ ಇದ್ದಾಗ ಆಟೋ ಚಾಲಕ ತಕ್ಷಣವೇ ರಸ್ತೆ ಬದಲಿಸಿ ಆಟೋ ಚಲಾಯಿಸಿದ್ದಾನೆ. ವಿದ್ಯಾರ್ಥಿನಿ ಇಳಿಯಬೇಕಾದ ಸ್ಥಳವನ್ನು ಕ್ರಾಸ್ ಮಾಡಿ ಮುಂದೆ ಹೋಗಿದ್ದು, ಅಲ್ಲಿಂದ ಯಮನಪೇಟೆಯಲ್ಲಿ ವ್ಯಾನ್ ವೊಂದು ಬಂದಿದ್ದು, ಆ ವ್ಯಾನ್ ಗೆ ಆಟೋದಿಂದ ಬಲವಂತವಾಗಿ ಯುವತಿಯನ್ನು ಹತ್ತಿಸಿ ಅಪಹರಿಸಿದ್ದಾರೆ.

ಇದಾದ ಬಳಿಕ ಗಾಟ್ಕೇಸರ ರೈಲ್ವೇ ಹಳಿಯ ಬಳಿ ಕೊಂಡು ಹೋಗಿ ಚಾಲಕ ಹಾಗೂ ಇನ್ನಿಬ್ಬರು ಆಕೆಯ ಬಟ್ಟೆಗಳನ್ನು ಹರಿದು ಅತ್ಯಾಚಾರ ಎಸಗಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಸೈರಲ್ ಕೇಳಿ ಬಂದಿದ್ದು, ತಕ್ಷಣವೇ ಆಕೆಯನ್ನು ಒಆರ್ ಆರ್ ಇಂಟರ್ಚೇಂಜ್ ಸರ್ವಿಸ್ ರಸ್ತೆಯ ಕಟ್ಟಡವೊಂದಕ್ಕೆ ಕೊಂಡೊಯ್ದಿದ್ದು, ಅಲ್ಲಿಯೂ ಪೊಲೀಸ್ ಸೈರನ್ ಕೇಳಿ ಬಂದಾಗ. ಪೊಲೀಸರು ತಮ್ಮನ್ನು ಹಿಂಬಾಳಿಸುತ್ತಿದ್ದಾರೆ ಎಂದು ಅನುಮಾನಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿದ್ಯಾರ್ಥಿನಿ ತಕ್ಷಣವೇ ತನ್ನ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಅವರು ತಮ್ಮ ಸಂಬಂಧಿ ಯುವಕನೋರ್ವನ ಸಹಾಯ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೀಸರಾ ಮತ್ತು ಗಾಟ್ಕೆಸರ್​ ಠಾಣಾ ಪೊಲೀಸರು ತಂಡ ರಚಿಸಿ  ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿನಿಯ ಫೋನ್ ಲೊಕೇಶನ್ ಪತ್ತೆ ಹಚ್ಚಿ ಸ್ಥಳವನ್ನು ಪತ್ತೆ ಮಾಡಿದ್ದಾರೆ.

ಪೊಲೀಸ್ ಸೈರನ್ ನಿಂದಾಗಿ ವಿದ್ಯಾರ್ಥಿನಿಯ ಜೀವ ಉಳಿದಿದ್ದು, ಸುಮಾರು 7:50ರ ವೇಳೆಗೆ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ.  ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿಯ ಬಲಗಾಲಿಗೆ ಗಾಯವಾಗಿದೆ. ಅದೃಷ್ಟವಶಾತ್ ಆಕೆಗೆ ಗಂಭೀರವಾದ ಗಾಯಗಳಾಗಿಲ್ಲ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ