ಬಸ್ ಗೆ ಹತ್ತುವಾಗ ಮಹಿಳೆಯ ಮಾಂಗಲ್ಯ ಸರ ಕಿತ್ತ ಕಳ್ಳರು!
31/10/2023
ಮೂಡಿಗೆರೆ : ಕೆ ಎಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಮಹಿಳೆ ಯಶೋಧಮ್ಮ ಎಂಬುವರು ಬಸ್ಸಿಗೆ ಹತ್ತುವಾಗ ಕುತ್ತಿಗೆಯಲ್ಲಿ ಹಾಕಿದ್ದ 37 ಗ್ರಾಮ್ ಮಾಂಗಲ್ಯ ಸರ ಕಿತ್ತ ಖದೀಮರು ಪರಾರಿಯಾದ ಘಟನೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ.
1 ಲಕ್ಷಕ್ಕಿಂತಾ ಹೆಚ್ಚು ಬೆಲೆ ಬಾಳುವ ಮಾಂಗಲ್ಯ ಸರ ಕಳವಾಗಿದ್ದು, ಮಾಂಗಲ್ಯ ಕಳೆದುಕೊಂಡ ಮಹಿಳೆ ಕೊಟ್ಟಿಗೆಹಾರದ ತರುವೆ ಮೂಲದವರಾಗಿದ್ದಾರೆ.
ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾ ಇಲ್ಲದೇ ಇರುವುದಕ್ಕೆ ಈ ಕಳ್ಳತನ ಮಾಡುವುದಕ್ಕೆ ಅನುಕೂಲಕರವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.