ಮಹಿಳಾ ಪೊಲೀಸ್ ಮುಂದೆಯೇ ಡ್ರ್ಯಾಗರ್ ಹಿಡಿದು ಪುಡಿರೌಡಿಯ ಹುಚ್ಚಾಟ
ತುಮಕೂರು: ಮಹಿಳಾ ಪೊಲೀಸ್ ಮುಂದೆಯೇ ಡ್ರ್ಯಾಗರ್ ಹಿಡಿದು ಪುಡಿರೌಡಿ ಹುಚ್ಚಾಟ ನಡೆಸಿರೋ ಘಟನೆ ತುಮಕೂರಿನ ಅಶೋಕ ರಸ್ತೆಯಲ್ಲಿ ನಡೆದಿದೆ. ಕೈ ಯಲ್ಲಿ ಡ್ರ್ಯಾಗರ್ ಹಿಡಿದು ಒಂದು ಕ್ಷಣ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ ಪುಡಿರೌಡಿಯು, ಹುಚ್ಚಾಟ ಮೇರೆದ ಪುಡಿರೌಡಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೋಜಾ@ಮಧು ಎಂಬಾತನೇ ಪುಂಡಾಟ ಮೇರೆದು ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋಜಾ@ಮಧು, ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಹೊರಬಂದಿದ್ದನು.
ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು. ಆರೋಪಿಯನ್ನ ಹಿಡಿಯಲು ಹೋದ ವೇಳೆ ಎನ್ ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಡ್ರ್ಯಾಗರ್ ಹಿಡಿದು ಪುಂಡಾಟ ಮೆರೆದಿದ್ದಾನೆ.
ಸುಮಾರು ಅರ್ಧ ಗಂಟೆಗಳ ಕಾಲ ಮಹಿಳಾ ಪೊಲೀಸ್ ಮುಂದೆ ಹುಚ್ಚಾಟ ನಡೆಸಿದ ಆತನನ್ನು ಹರಸಾಹಸಪಟ್ಟು ಕೊನೆಗೂ ಹಿಡಿಯಲು ಯಶಸ್ವಿಯಾಗಿದ್ದಾರೆ.
ಪುಂಡಾಟ ಮೇರೆದ ಮೋಜಾ@ಮಧು ಹಾಗೂ ಆತನ ಜೊತೆಯಿದ್ದ ಮನೋಜ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw