ಹತ್ರಾಸ್ ಘಟನೆಯಿಂದ ಆಕ್ರೋಶಗೊಂಡು ಬೌದ್ಧ ಧರ್ಮ ಸ್ವೀಕರಿಸಿದ 236 ವಾಲ್ಮೀಕಿ ಸಮುದಾಯದ ಜನರು | ಸುಳ್ಳು ಸೃಷ್ಟಿಸಿ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ಮನುವಾದಿಗಳು
ಗಾಝಿಯಾಬಾದ್: ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸುಮಾರು 236 ಜನರು ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳ ಬಳಿಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿದ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಇದನ್ನು ಸಹಿಸದ ಕೆಲವು ಕಿಡಿಗೇಡಿ ಸಂಘಟನೆಗಳು ಇಲ್ಲಸಲ್ಲದ ಅಪಪ್ರಚಾರಗಳನ್ನು ನಡೆಸಿದ ಘಟನೆ ವರದಿಯಾಗಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮೊಂಟು ಚಂಡೇಲ್ ಎಂಬವರು ದೂರು ನೀಡಿದ್ದು, ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 153 ಹಾಗೂ 505ರಡಿಯಲ್ಲಿ ದೂರು ದಾಖಲಾಗಿದೆ.
ಬೌದ್ಧ ಧರ್ಮಕ್ಕೆ ಮತಾಂತರ ಆಗಲು ಹೆಸರು ಮತ್ತು ವಿಳಾಸ ಹಾಗೂ ದಿನಾಂಕಗಳನ್ನು ನೀಡಲಾಗಿದೆ. ಅಲ್ಲಿ ನೋಂದಣಿ ಸಂಖ್ಯೆ ಇಲ್ಲ ಹಾಗಾಗಿ ಅಲ್ಲಿ ಯಾರ ಹೆಸರು ಬೇಕಾದರೂ ಬರೆದು ಮತಾಂತರ ಮಾಡಬಹುದು ಎಂದು ಕೆಲವು ಸಂಘಟನೆಗಳು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಸೋದರಳಿಯ ರಾಜರತನ್ ಅಂಬೇಡ್ಕರ್, ಅಕ್ಟೋಬರ್ 14ರಂದು ಬೌದ್ಧ ಧರ್ಮಕ್ಕೆ ಸೇರ್ಪಡೆ ಕಾರ್ಯಕ್ರಮ ಆಗಿಲ್ಲ ಎಂದು ಹೇಗೆ ಹೇಳುತ್ತಾರೆ? ಈ ಕಾರ್ಯಕ್ರಮ ಫೇಸ್ ಬುಕ್ ಲೈವ್ ನಲ್ಲಿಯೂ ಬಂದಿದೆ. 236 ಜನರಿಗೆ ಬುದ್ದಿಷ್ಟ್ ಸೊಸೈಟಿ ಆಫ್ ಇಂಡಿಯಾದಿಂದ ಪ್ರಮಾಣ ಪತ್ರ ನೀಡಲಾಗಿದೆ. 1955ರಲ್ಲಿ ಈ ಸೊಸೈಟಿಯನ್ನು ಅಂಬೇಡ್ಕರ್ ಅವರೇ ಸ್ಥಾಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.