ನಿಲ್ಲದ ಯುದ್ಧ: ಗಾಝಾ ಕದನ ವಿರಾಮಕ್ಕೆ ಈಜಿಪ್ಟ್, ಜೋರ್ಡಾನ್ ಒತ್ತಾಯ; ಇಸ್ರೇಲ್ ದಾಳಿಗೆ ಮತ್ತೆ 68 ಮಂದಿ ಬಲಿ
ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಈಜಿಪ್ಟ್ ಮತ್ತು ಜೋರ್ಡಾನ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರನ್ನು ಒತ್ತಾಯಿಸಿವೆ. ಇಸ್ರೇಲ್ ಪಡೆಗಳು ಆಶ್ರಯತಾಣಗಳು, ಆಸ್ಪತ್ರೆ, ಶಾಲೆ ಮತ್ತು ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ಹೊಸ ಬಾಂಬ್ ದಾಳಿಗಳಲ್ಲಿ 68 ಮಂದಿ ಸಾವನ್ನಪ್ಪಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈಜಿಪ್ಟ್ ಮತ್ತು ಜೋರ್ಡಾನ್ ಸಹವರ್ತಿಗಳೊಂದಿಗೆ ಹಾಜರಿದ್ದ ಬ್ಲಿಂಕೆನ್, ಇಸ್ರೇಲ್ ಗೆ ಕದನ ವಿರಾಮ ಎಂದರೆ ಗಾಝಾವನ್ನು ನಿಯಂತ್ರಿಸುವ ಫೆಲೆಸ್ತೀನ್ ಬಂಡುಕೋರರ ಗುಂಪು ಹಮಾಸ್ ಗೆ ಮರುಸಂಘಟನೆಗೆ ಅವಕಾಶ ನೀಡುವುದು ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಬಹು ಆಯಾಮದ ದಾಳಿಯನ್ನು ಪ್ರಾರಂಭಿಸಿದಾಗ 1,400 ಕ್ಕೂ ಹೆಚ್ಚು ಜನರನ್ನು ಕೊಂದು 240 ನಾಗರಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಾಗ ಪ್ರಾರಂಭವಾದ ಈ ಯುದ್ಧವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಯುಎನ್ ಮತ್ತು ವಿಶ್ವ ಶಕ್ತಿಗಳು ಇನ್ನೂ ಒಮ್ಮತಕ್ಕೆ ಬಂದಿಲ್ಲ.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕ್ರೂರ ಪ್ರತಿದಾಳಿ ನಡೆಸಿ ಗಾಝಾವನ್ನು ದಿಗ್ಬಂಧನಕ್ಕೇರಿಸಿದೆ. ತರುವಾಯ, ಜನನಿಬಿಡ ಫೆಲೆಸ್ತೀನ್ ಪ್ರದೇಶದಲ್ಲಿ ತನ್ನ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಮಾರಣಾಂತಿಕ ದಾಳಿಯಲ್ಲಿ ಸುಮಾರು 9,500 ಜನರು ಸಾವನ್ನಪ್ಪಿದ್ದಾರೆ.