ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಲು ನಿತಿನ್ ಗಡ್ಕರಿಗೆ ಸಂಸದ ನಳಿನ್ ಕುಮಾರ್ ಮನವಿ - Mahanayaka
10:01 PM Thursday 19 - September 2024

ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಲು ನಿತಿನ್ ಗಡ್ಕರಿಗೆ ಸಂಸದ ನಳಿನ್ ಕುಮಾರ್ ಮನವಿ

12/02/2021

ಮಂಗಳೂರು: ಮಂಗಳೂರು-ಉಡುಪಿ ಹೆದ್ದಾರಿಯ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್ ನ್ನು ರದ್ದುಪಡಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಶೀಘ್ರವೇ  ಸಭೆ ಕರೆಯಲು ಆದೇಶ ನೀಡುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ.

ಗುರುವಾರ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಕಟೀಲ್, ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಭಾರತ್ ಮಾಲಾ ಯೋಜನೆಯಡಿ ದ್ವಿಪಥ ರಸ್ತೆಯಾಗಿರುವ ಮುಲ್ಕಿ-ಕಟೀಲು-ಕೈಕಂಬ-ಪೊಳಲಿ-ಬಿ. ಸಿ. ರೋಡು-ಪಾಣೆ ಮಂಗಳೂರು- ತೊಕ್ಕೊಟ್ಟು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿಯೂ ಇದೇ ಸಂದರ್ಣದಲ್ಲಿ ನಿತಿನ್ ಗಡ್ಕರಿ ತಿಳಿಸಿದ್ದು, ಬೆಂಗಳೂರು-ಮಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾಗಿರುವ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರದ ತನಕ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿಯೂ ಇದೇ ವೇಳೆ ತಿಳಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ