ದುರಂತ: ತಮಿಳುನಾಡಿನ ತಿರುಚ್ಚಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ: ಬೆಚ್ಚಿಬೀಳಿಸಿದ ಘಟನೆ
08/11/2023
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿಎಫ್) ನ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್ (40) ಎಂಬುವವರು ತಮಿಳುನಾಡಿನ ತಿರುಚ್ಚಿ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2006ರಲ್ಲಿ ಆರ್ ಪಿಎಫ್ ಗೆ ಸೇರ್ಪಡೆಯಾದ ಮಂಜುನಾಥ್, ತಿರುಚ್ಚಿ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳವಾರ ರಾತ್ರಿ ಕೊಲ್ಲಂನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ರೈಲು ಸಮೀಪಿಸುತ್ತಿದ್ದಂತೆ ಕರ್ತವ್ಯದಲ್ಲಿದ್ದ ಅವರು ರೈಲ್ವೆ ಹಳಿಯ ಮೇಲೆ ತಲೆಯಿಟ್ಟು ರೈಲಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ.ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರ್ ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಮಂಜುನಾಥ್ ಅವರ ಶವವನ್ನು ವಶಪಡಿಸಿಕೊಂಡಿದ್ದು, ನಂತರ ಶವಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ