ಚಾಕುವಿನಿಂದ ಇರಿದುಕೊಂಡು ಕರ್ಣಾಟಕ ಬ್ಯಾಂಕಿನ ಹಿರಿಯ ಅಧಿಕಾರಿ ಸಾವಿಗೆ ಶರಣು - Mahanayaka

ಚಾಕುವಿನಿಂದ ಇರಿದುಕೊಂಡು ಕರ್ಣಾಟಕ ಬ್ಯಾಂಕಿನ ಹಿರಿಯ ಅಧಿಕಾರಿ ಸಾವಿಗೆ ಶರಣು

dakshina kannada
09/11/2023

ಮಂಗಳೂರು: ಚಾಕುವಿನಿಂದ ಇರಿದುಕೊಂಡು ಕರ್ಣಾಟಕ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಅಪಾರ್ಟ್ ಮೆಂಟ್ ನಲ್ಲಿ ಸಾವಿಗೆ ಶರಣಾಗಿರುವ ಅನುಮಾನಾಸ್ಪದ ಘಟನೆ  ಮಂಗಳೂರಿನ ಬೋಂದೆಲ್ ನಲ್ಲಿ ನಡೆದಿದೆ.


Provided by

ಮೃತಪಟ್ಟಿರುವ  ಅಧಿಕಾರಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದ ವಾದಿರಾಜ ಆಚಾರ್ಯ(55) ಎನ್ನುವವರಾಗಿದ್ದಾರೆ.  ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಕೊಯ್ದಿರುವ ಗಾಯದೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.  ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ