ಚಿನ್ನ ಗೆದ್ದ ರಕ್ಷಿತಾರಾಜುಗೆ  ಟೈಲರ್ಸ್ ಸಂಘ ಸನ್ಮಾನ - Mahanayaka

ಚಿನ್ನ ಗೆದ್ದ ರಕ್ಷಿತಾರಾಜುಗೆ  ಟೈಲರ್ಸ್ ಸಂಘ ಸನ್ಮಾನ

rakshitha raju
11/11/2023

ಕೊಟ್ಟಿಗೆಹಾರ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಮೂಡಿಗೆರೆ ವತಿಯಿಂದ ಪ್ಯಾರಾ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ರಕ್ಷಿತಾರಾಜು ಅವರನ್ನು ಬಾಳೂರಿನ ಗುಡ್ನಳ್ಳಿಯ ಅವರ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.


Provided by

ಕೋಚ್ ರಾಹುಲ್ ಬಾಲಕೃಷ್ಣ, ತಬರೇಜ್ ಖಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ,ಉಪಾಧ್ಯಕ್ಷ ಎಂ.ಕೆ.ಶಣ್ಮುಖಾನಂದ, ಬಣಕಲ್ ವಲಯ ಸಮಿತಿ ಅಧ್ಯಕ್ಷ ಶಂಕರ್ ಟೈಲರ್,ಉಪಾಧ್ಯಕ್ಷ ಕೃಷ್ಣ ಟೈಲರ್ ಜಾವಳಿ, ಬಿಳುಗುಳ ವಲಯ ಸಮಿತಿ ಅಧ್ಯಕ್ಷ ಮಂಜುಳ ಟೈಲರ್,ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಿರೀಶ್,ತೀರ್ಥ ಟೈಲರ್, ವಿಶ್ವನಾಥ್, ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ