ಈಶ್ವರಪ್ಪ-ಸಿದ್ದರಾಮಯ್ಯರನ್ನು ಬೀರಪ್ಪನೇ ಕಾಪಾಡಬೇಕು | ಇಬ್ಬರು ನಾಯಕರ ಜಟಾಪಟಿಯ ಬಗ್ಗೆ ಬಸವರಾಜ ದೇವರು ಸ್ವಾಮೀಜಿ ಪ್ರತಿಕ್ರಿಯೆ - Mahanayaka
2:01 PM Thursday 12 - December 2024

ಈಶ್ವರಪ್ಪ-ಸಿದ್ದರಾಮಯ್ಯರನ್ನು ಬೀರಪ್ಪನೇ ಕಾಪಾಡಬೇಕು | ಇಬ್ಬರು ನಾಯಕರ ಜಟಾಪಟಿಯ ಬಗ್ಗೆ ಬಸವರಾಜ ದೇವರು ಸ್ವಾಮೀಜಿ ಪ್ರತಿಕ್ರಿಯೆ

12/02/2021

ಧಾರಾವಾಡ: ಕುರುಬ ಸಮುದಾಯದ ಹೋರಾಟದ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಜಟಾಪಟಿಗೆ ಸಂಬಂಧಿಸಿದಂತೆ  ಧಾರವಾಡದ ಮನ್ಸೂರ ರೇವಣಸಿದ್ದೇಶದವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ದು,  ಸಿದ್ದರಾಮಯ್ಯ-ಈಶ್ವರಪ್ಪರನ್ನು ಬೀರಪ್ಪನೇ ಕಾಯಬೇಕು ಎಂದು ಅವರು ಹೇಳಿದ್ದಾರೆ.

ಇದು ಸಾಂವಿಧಾನಿಕ ಹಕ್ಕು ಕೇಳುವ ಸಮಯ ಈ ವೇಳೆ ಬೇರೆ ಬೇರೆ ವಿಚಾರ ಬರಬಾರದು ಎಂದು ಸ್ವಾಮೀಜಿ ಹೇಳಿದ್ದು,  ವ್ಯಕ್ತಿ ಪ್ರತಿಷ್ಠೆಯ ಮಧ್ಯೆ ಕುರುಬರ ಕುರಿಗಳನ್ನು ಎಲ್ಲೋ ಒಂದು ಕಡೆ ನೂಕುತ್ತಾರೇನೋ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಸ್ ಟಿ ಹೋರಾಟ ವ್ಯಕ್ತಿ ಪ್ರತಿಷ್ಠೆ ಆಗಬಾರದು. ಇವರೆಲ್ಲರೂ ಸಮುದಾಯದ ನಾಯಕರಾಗಿದ್ದಾರೆ. ನಾಯಕರಿಂದ ಸಮುದಾಯ ಅಲ್ಲ. ಇದನ್ನು ಈ ಮುಖಂಡರು ಅರ್ಥ ಮಾಡಿಕೊಳ್ಳಬೇಕು.  ಸಂವಿಧಾನದ ಹಕ್ಕನ್ನು ಪಡೆಯಲು ಎಲ್ಲ ನಾಯಕರು ಒಗ್ಗೂಡಬೇಕು ಎಂದು ಅವರು ಹೇಳಿದರು.

ಈ ಇಬ್ಬರು ನಾಯಕರಿಗೂ ಸಮಾಜದ ಭಯ, ಆತ್ಮಸಾಕ್ಷಿ ಇರಬೇಕು. ಯಾರೇ ಆಗಲಿ ಸಮುದಾಯವನ್ನು ಬಲಿ ಕೊಡಬಾರದು. ಸಮುದಾಯದ ದಿಕ್ಕು ತಪ್ಪಿಸಬಾರದು. ಈ ರೀತಿಯಾಗಿ ಇಬ್ಬರು ಕೂಡ ನಡೆದುಕೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು

ಇತ್ತೀಚಿನ ಸುದ್ದಿ