ದಂಪತಿಯ ಮೇಲೆ ದಾಳಿ ನಡೆಸಿ ಮರ ಏರಿ ಕುಳಿತ ಚಿರತೆ ಕೊನೆಗೂ ಸೆರೆ - Mahanayaka
2:06 PM Thursday 12 - December 2024

ದಂಪತಿಯ ಮೇಲೆ ದಾಳಿ ನಡೆಸಿ ಮರ ಏರಿ ಕುಳಿತ ಚಿರತೆ ಕೊನೆಗೂ ಸೆರೆ

12/02/2021

ಕಡಬ: ತಾಲೂಕಿನ ರೆಂಜಲಾಡಿ ಗ್ರಾಮದ ಹೇರ ಎಂಬಲ್ಲಿ ದಂಪತಿಯ ಮೇಲೆ ದಾಳಿ ನಡೆಸಿದ ಚಿರತೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದು, ದಂಪತಿಯ ಮೇಲೆ ದಾಳಿ ನಡೆಸಿದ ಬಳಿಕ ಚಿರತೆ ಮರ ಏರಿ ಕುಳಿತಿತ್ತು.

ಕಡಬದ ಕುಟ್ರುಪ್ಪಾಡಿ ಗ್ರಾಮದ ರಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ್ ಕಾಮತ್ ಹಾಗೂ ಸೌಮ್ಯ ಕಾಮತ್ ಎಂಬವರು ಇಂದು ಬೆಳಗ್ಗೆ ತೋಟಕ್ಕೆ ಪೈಪ್ ಜೆಟ್ ಬದಲಾಯಿಸಲೆಂದು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು.

ಚಿರತೆ ದಾಳಿಯಿಂದ ಗಾಯಗೊಂಡಿದ್ದ ದಂಪತಿಯನ್ನು  ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಿಲಿಕುಳದ ನುರಿತ ಶೂಟರ್ ಡಾ.ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ.ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಯಶಸ್ವಿಯಾಗಿ ಚಿರತೆಯನ್ನು ಸೆರೆ ಹಿಡಿದ್ದಾರೆ. ಕಳೆದ ಹಲವು ದಿನಗಳಿಂದ ಭಯ ಭೀತರಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ